ವಿಜಯಪುರ : ಕೊಲ್ಹಾರ ತಾಲೂಕಿನ ಜಾಕವೆಲ್ ಬಳಿ ತೆಪ್ಪ ಮುಗಿಚಿ ಕೃಷ್ಣಾ ನದಿಯಲ್ಲಿ ಐವರು ನೀರು ಪಾಲು ಪ್ರಕರಣ ಮೂವರ ಮೃತದೇಹ ಪತ್ತೆಯಾಗಿದ್ದು, ಇಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ನೀರು ಪಾಲಾಗಿದ್ದ ಪುಂಡಲೀಕ ಯಂಕಂಚಿ, ತಯ್ಯಬ್ ಚೌದರಿ, ಕೊಲ್ಹಾರ ಪಟ್ಟಣದ ದಶರಥ ಗೌಡರ್ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಶವಗಳನ್ನ ರವಾನೆ ಮಾಡಲಾಗಿದೆ. ಮತ್ತೀಬ್ಬರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಕೃಷ್ಣನದಿಯ ತಟದಲ್ಲಿ ೮ ಜನರು ಇಸ್ಪೀಟ್ ಆಟ ಆಡುತ್ತಿದ್ದರು. ಈ ವಿಚಾರ ತಿಳಿದು ಪೊಲೀಸರು ದಾಳಿ ಮಾಡಿದ್ದು ತಪ್ಪಿಸಿಕೊಳ್ಳಲು ೮ ಜನರು ತೆಪ್ಪದಲ್ಲಿ ನದಿಯ ಮತ್ತೊಂದು ಕಡೆಗೆ ಹೋಗುತ್ತಿದ್ದ ವೇಳೆ ತೆಪ್ಪ ಮೊಗಚಿ ಈ ಘಟನೆ ಸಂಭವಿಸಿದೆ.





