Mysore
27
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಬರಪರಿಹಾರದ ಮೊದಲ ಕಂತಿನ ಹಣ: ಕೃಷ್ಣ ಬೈರೇಗೌಡ

ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು ಈ ಹಿಂದೆ ಬರಪರಿಹಾರ ಹಾಗೂ ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ಬೆಳೆ ಬೆಳೆಯದ ಎಷ್ಟೋ ಜನರಿಗೆ ಪರಿಹಾರದ ಹಣ ಸಿಗುತ್ತಿತ್ತು. ನಿಜವಾಗಿಯೂ ಬೆಲೆಗಳು ಹಾನಿಯಾದ ರೈತನಿಗೆ ಪರಿಹಾರ ಸಿಗುತ್ತಿರಲಿಲ್ಲ. ಈ ಹಿಂದಿನ ಸರ್ಕಾರ ಇದ್ದಾಗ ಹಾಗೂ ನಾನು ಈ ಹಿಂದೆ ಕೃಷಿ ಸಚಿವನಾಗಿದ್ದಾಗಲೂ ಇಂತಹದ್ದನ್ನು ನೋಡಿದ್ದೇನೆ. ಯಾರದ್ದೋ ಜಮೀನು, ಇನ್ಯಾರದ್ದೋ ಖಾತೆಗೆ ಹಣ ಜಮಾವಣೆಯಾಗಿದೆ. ರೈತರು ಬೆಳೆದಿದ್ದ ಬೆಳೆಯೇ ಬೇರೆ, ಅವರಿಗೆ ಬಂದಿದ್ದ ಪರಿಹಾರದ ಹಣವೇ ಬೇರೆ. ಅಧಿಕಾರಿಗಳು ಬೆಲೆ ಮಾಹಿತಿ ಸಂಗ್ರಹಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲವನ್ನೂ ಸರಿ ಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿ ಮಾಡಲಾಗಲಿದೆ ಎಂದು ತಿಳಿಸಿದರು.

ಇದನ್ನು ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಮುಂದಿನ ಒಂದು ವಾರದಲ್ಲಿ ಮೊದಲ ಕಂತಿನ ಹಣ ಜಮಾ ಆಗಲಿದೆ. 12 ಲಕ್ಷ ರೈತರಿಗೆ ಹಣ ಪಾವತಿ ಮಾಡಲು ಆರ್‌ಬಿಐಗೆ ಪೇಮೆಂಟ್‌ ಆರ್ಡರ್‌ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ರೈತರ ಪೇಮೆಂಟ್‌ ಆರ್ಡರ್‌ ಅನ್ನು ಮುಂದಿನ ದಿನಗಳಲ್ಲಿ ಕಳುಹಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರಪರಿಹಾರ ಹಣಕ್ಕಾಗಿ ಮನವಿ ಮಾಡಿದ್ದು, ಇನ್ನೂ ಸಹ ಹಣ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ 2000 ಹಣವನ್ನು ನೀಡಲು ಮುಂದಾಗಿದೆ ಎಂದೂ ಸಹ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!