Mysore
34
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಹೇಳಿಕೆ: ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌

ಯಾದಗಿರಿ: ಗಣೇಶ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸೆಪ್ಟೆಂಬರ್.‌21ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ಭಾಗಿಯಾಗಿದ್ದರು. ಈ ವೇಳೆ ಅನ್ಯಕೋಮಿನ ಜನಾಂಗದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಗಣೇಶ ವಿಸರ್ಜನೆ ವೇಳೆ ಎಲ್ಲಾ ಕಡೆ ಕಲ್ಲು ತೂರುವ ಪ್ರವೃತ್ತಿ ಕಾಣಿಸುತ್ತಾ ಇದೆ. ಕಲ್ಲು ಹೊಡೆಯುವ ಪ್ರವೃತ್ತಿ ಅವರಿಗೆ ಯಾಕೆ ಬರುತ್ತೆ? ಹಿಂದುಗಳು ಕೈಯಲ್ಲಿ ಕಲ್ಲು ಹಿಡಿದುಕೊಂಡರೆ ನಿಮ್ಮ ಕಥೆ ಏನಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ನ್ಯೂಕ್ಲಿಯರ್‌ ಬಾಂಬ್‌ ಮಾಡಿದ ಹಿಂದುಗಳಿಗೆ ಪೆಟ್ರೋಲ್‌ ಬಾಂಬ್‌ ಮಾಡೋಕೆ ಬರಲ್ವಾ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಧಾರ್ಮಿಕ ನಂಬಿಕೆಗಳಿಗೆ ದ್ವೇಷ ಭಾವನೆಯಿಂದ ಮಾತನಾಡಿದ್ದಾರೆ ಎಂದು ಆರೋಪಿಸಿ ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Tags:
error: Content is protected !!