Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮುಂಗಾರು ಅಬ್ಬರ: ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಮುಂಗಾರು ಅಬ್ಬರು ಜೋರಾಗಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ರಾಜ್ಯದ ಹಲವು ನದಿಗಳು ಬಹುತೇಕ ತುಂಬಿ ಹರಿಯುತ್ತಿದ್ದು, ಅಪಾಯಮಟ್ಟಿ ಮೀರಿ ಹರಿಯುತ್ತಿದೆ. ಇನ್ನು ಮಹಾರಾಷ್ಟ್ರ, ಗೋವಾ ಕರ್ನಾಟಕ ಗಡಿ ಭಾಗದಲ್ಲಿನ ಹಲವು ಜಲಪಾತಗಳು ತುಂಬಿ ಹರಿಯುತ್ತಿವೆ.

ಕರ್ನಾಟಕ ಗೋವಾ ಗಡಿಗಳಲ್ಲಿ ಹೆಚ್ಚಿನ ಝರಿ, ಜಲಪಾತಗಳು ಕಂಡುಬರುತ್ತವೆ. ಮತ್ತು ಮುಂಗಾರಿನಲ್ಲಿ ಈ ಜಲಪಾತಗಳು ಮೈದುಂಬಿ ಹರಿಯುವ ರಮಣೀಯ ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಚಾರಣಕ್ಕೆ ತೆರಳುತ್ತಾರೆ. ಇದೇ ರೀತಿಯಲ್ಲಿ ಗೋವಾ, ಕರ್ನಾಟಕ ಗಡಿಯಲ್ಲಿರುವ ಪಾಲಿ ಜಲಪಾತ ಹುಕ್ಕಿ ಹರಿಯುತ್ತಿದ್ದು, ಪ್ರವಾಹದ ಸ್ಥಿತಿ ಉಂಟಾಗಿದೆ.

ಇನ್ನು ವೀಕೆಂಡ್‌ನಲ್ಲಿ ಮೋಜು ಮಸ್ತಿಗಾಗಿ ಚಾರಣಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಪಾಲಿ ಜಲಪಾತ ವೀಕ್ಷಣೆಗಾಗಿ ರಾಜ್ಯದಿಂದ ಕನಿಷ್ಠ 50 ಮಂದಿ ತೆರಳಿದ್ದು, ಪ್ರವಾಹದಲ್ಲಿ ಸಿಲುಕಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ 150ಕ್ಕೂ ಹೆಚ್ಚುಮಂದಿ ಪ್ರವಾಹಲ್ಲಿ ಸಿಲುಕಿದ್ದು, ಅರಣ್ಯ ಇಲಾಖೆ ,ಅಗ್ನಿಶಾಮಕ ಸಿಬ್ಬಂದಿ ಈ ಎಲ್ಲಾ ಪ್ರವಾಸಿಗರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಕರ್ನಾಟಕದಿಂದ ಚಾರಣಕ್ಕೆ ತೆರಳಿದ್ದ 50 ಮಂದಿ ಸುರಕ್ಷಿತವಾಗಿ ವಾಪಸಾಗಿದ್ದಾರೆ.

Tags:
error: Content is protected !!