ಮುಂದಿನ ಆರು ದಿನಗಳ ಕಾಲ ಕರ್ನಾಟಕದ ೧೦ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ , ಉತ್ತರ ಕನ್ನಡ , ಉಡುಪಿ, ಬೆಳಗಾವಿ, ಬೀದರ್, ಕಲಬುರುಗಿ, ಯಾದಗಿರಿ, ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲ್ಲದೆ ಧಾರವಾಡ, ಗದಗ, ಹಾವೇರಿ, ಕೊಪ್ಪಳ,ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಲೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ಮೈಸೂರು, ಹಾಸನ, ಕೊಡಗು, ಮಂಡ್ಯ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ.
ಈಗಾಗಲೇ ಕ್ಯಾಸಲ್ರಾಕ್ , ಮಂಕಿ, ಕೊಟ್ಟಿಗೆ ಹಾರ, ಲೋಂಡಾ. ಕಮಟಾ, ಕೊಲ್ಲೂರು, ಗೋಕರ್ಣ, ಸೇಡಂ, ಆಗುಂಬೆಯಲ್ಲಿ ಮಳೆಯಾಗಿದೆ . ಕಾರವಾರ, ಉಡುಪಿ, ಧರ್ಮಸ್ಥಳ, ಕಳಸ, ಕಾರ್ಕಾಳ ದಲ್ಲೂ ಕೂಡ ಮಳೆಯಾಗಿದೆ. ಅದರಲ್ಲೂ ಕರಾವಳಿಭಾಗದಲ್ಲೂ ಕೂಡ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ.