Mysore
21
overcast clouds
Light
Dark

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ 185ಕೋಟಿ ರೂ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇಡಿ (ಜಾರಿ ನಿರ್ದೇಶನಾಲಯ) ಶುಕ್ರವಾರ (ಜುಲೈ.೧೨) ಬಂಧಿಸಿದೆ.

ಪ್ರಕರಣದ ವಿಚಾರ ಸಂಬಂಧ ನಾಗೇಂದ್ರ ಮನೆಗೆ ನಾಲ್ವರು ಇಡಿ ಅಧಿಕಾರಿಗಳ ತಂಡ ಆಗಮಿಸಿತ್ತು. ವಿಚಾರಣೆ ನಡೆಸಿದ ಕೆಲ ಸಮಯದ ಬಳಿಕ ದಿಢೀರ್‌ ನಾಗೇಂದ್ರ ಅವರನ್ನು ಇಡಿ ಬಂಧಿಸಿ ಕರೆದೊಯ್ಯಿತು.

ನಾಗೇಂದ್ರ ಅವರನ್ನು ಸ್ವಗೃಹದಲ್ಲಿ ಬಂಧಿಸಿ ಅಲ್ಲಿಂದ ನೇರವಾಗಿ ಶಾಂತಿನಗರದ ಇಡಿ ಕಚೇರಿಗೆ ಕರೆದೊಯ್ಯಲಾಗಿದೆ.

ಬುಧವಾರಷ್ಟೇ ನಾಗೇಂದ್ರ, ದದ್ದಲ್‌ ಹಾಗೂ ಅವರ ಆಪ್ತರ ಮನೆಗಳಿಗೆ, ಕಚೇರಿಗೆ ಇಡಿ ದಾಳಿ ನಡೆಸಿ ಅಗತ್ಯ ದಾಖಲೆಗಳು, ಮಾಹಿತಿಯನ್ನು ಪಡೆದು ತೆರಳಿತ್ತು. ಇದಾದ ಎರಡೇ ದಿನಗಳಲ್ಲಿ ನಾಗೇಂದ್ರ ಅವರನ್ನು ಬಂಧಿಸಿದ್ದು, ನಿಗಮದ ಹಗರಣ ಸಂಬಂಧ ಬಿಗ್‌ ಟ್ವಿಸ್ಟ್‌ ಉಂಟಾಗಿದೆ.