Mysore
27
overcast clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಸಿಎಂ ಆಗುವ ಆಸೆ ಎಲ್ಲರಿಗೂ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಮಂಗಳೂರು: ನಾನು ಸಿಎಂ ಎಂಬ ಕನಸು ಜನರಿಗೂ ಇದೆ. ಶಾಸಕರಿಗೂ ಇದೆ. ಪಕ್ಷದ ಏನು ಹೇಳುತ್ತದೆ ಅದನ್ನು ಕೇಳಬೇಕು. ಎಲ್ಲದಕ್ಕೂ ಸಮಯವೇ ಉತ್ತರ ನೀಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನಾನು ಸಿಎಂ ಎಂಬ ಕನಸು ಜನರಿಗೂ ಇದೆ. ಶಾಸಕರಿಗೂ ಇದೆ. ಪಕ್ಷದ ಏನು ಹೇಳುತ್ತದೆ ಅದನ್ನು ಕೇಳಬೇಕು. ಎಲ್ಲದಕ್ಕೂ ಸಮಯವೇ ಉತ್ತರ ನೀಡುತ್ತದೆ ಎಂದು ಹೇಳಿದರು.

ಇನ್ನು ರಾಜ್ಯ ಬಜೆಟ್‌ ಬಳಿಕ ಅಧಿಕಾರ ಹಂಚಿಕೆಯಾಗಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದೆಲ್ಲದಕ್ಕೂ ಸಮಯವೇ ಉತ್ತರ ನೀಡಲಿದೆ ಎಂದರು.

ಈ ಮೂಲಕ ಬಜೆಟ್‌ ಬಳಿಕ ಸಿಎಂ ಕುರ್ಚಿ ಕದನ ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದ್ದು, ಇದು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Tags:
error: Content is protected !!