Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ತೆರಿಗೆ ಹಂಚಿಕೆ ತಾರತಮ್ಯದ ಆರೋಪ ನಿರಾಧಾರ: ನಿರ್ಮಲಾ ಸೀತಾರಾಮನ್‌

ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯವು ಘಟಿಕೋತ್ಸವ ಭವನದಲ್ಲಿ ಇಂದು ( ಮಾರ್ಚ್‌ 24 ) ಆಯೋಜಿಸಿದ್ದ ಅನೌಪಚಾರಿಕ ಸಂವಾದದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧದ ಅನುದಾನ ಹಂಚಿಕೆ ತಾರತಮ್ಯದ ಆರೋಪ ನಿರಾಧಾರ, ಈ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಮೂಲಕ ಸಿದ್ದರಾಮಯ್ಯನವರ ಆರೋಪವನ್ನು ನಿರ್ಮಲಾ ಸೀತಾರಾಮನ್‌ ತಳ್ಳಿಹಾಕಿದರು. ಮೈಸೂರಿನಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲಿ ಚಿಂತಕರ ವೇದಿಕೆ ಆಯೋಜಿಸಿದ್ದ ಅನೌಪಚಾರಿಕ ಸಂವಾದದಲ್ಲಿಯೂ ಸಹ ನಿರ್ಮಲಾ ಸೀತಾರಾಮನ್‌ ಈ ಕುರಿತು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕಕ್ಕೆ 5495 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಹೇಳಿಕೆ ಸಂಪೂರ್ಣ ಸುಳ್ಳು, ಹಣಕಾಸು ವರದಿಯಲ್ಲಿ ಅಂತಹ ಯಾವುದೇ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. ಕರ್ನಾಟಕಕ್ಕೆ ಪ್ರತಿ ಪೈಸೆಯನ್ನು ಲೆಕ್ಕ ಹಾಕಲಾಗಿದೆ ಹಾಗೂ ಬಿಡುಗಡೆಯನ್ನೂ ಸಹ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು.

Tags: