Mysore
17
few clouds

Social Media

ಬುಧವಾರ, 28 ಜನವರಿ 2026
Light
Dark

ಕಾಂಗ್ರೆಸ್ ಆಳ್ವಿಕೆಯಲ್ಲಿ ಇಡೀ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ: ಬಿಜೆಪಿ ವ್ಯಂಗ್ಯ

ಬೆಂಗಳೂರು : ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಬಿಜೆಪಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಆಳ್ವಿಕೆಯಲ್ಲಿ ಇಡೀ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ ಎಂದು ವ್ಯಂಗ್ಯವಾಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರ ನೆರಳಿನ ಫೋಟೋ ಹಾಕಿ, ವಿವಿಧ ಯೋಜನೆಗಳಿಗೆ ಗ್ರಹಣ ಹಿಡಿದಿದೆ ಎಂದು ಬರೆದುಕೊಂಡಿದೆ.

ಕಾವೇರಿಗೆ, ವಿದ್ಯುತ್ಗೆ, ಅಭಿವೃದ್ಧಿಗೆ, ಅನ್ನಭಾಗ್ಯಕ್ಕೆ, ಕೈಗಾರಿಕೆಗಳಿಗೆ, ಕುಡಿಯುವ ನೀರಿಗೆ, ಕೃಷಿ ಉತ್ಪನ್ನಗಳಿಗೆ ಹಾಗೂ ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ ಹಿಡಿದೆದೆ. 30 ವರ್ಷಗಳ ಹಿಂದಿನ “ಆ ದಿನಗಳ ಗ್ರಹಣ” ಇದೀಗ ಸಿದ್ದರಾಮಯ್ಯರವರ ಸರ್ಕಾರದ ಕೃಪೆಯಿಂದ ಕರ್ನಾಟಕಕ್ಕೆ ಮತ್ತೊಮ್ಮೆ ವಕ್ಕರಿಸಿದೆ ಎಂದು ವಾಗ್ದಾಳಿ ನಡೆಸಿದೆ.

ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ, ಎಚ್ಚರಿಕೆ ಎಂದು ಬಸ್ಗಳಲ್ಲಿ ಹಾಕಬೇಕು. ಸಾಮಾನ್ಯ ಬಸ್ಗಳ ದರವನ್ನೂ ನಾಲ್ಕೇ ತಿಂಗಳಲ್ಲಿ 20% ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆಗೆ ಇಳಿದಿದೆ. ಮೊದಲು 160 ರೂ. ನಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಈಗ 200 ರೂ, ಮಾಡಿ ಕೈ ಸುಟ್ಟುಕೊಳ್ಳಬೇಕಾಗಿದೆ. ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ ಎಂದು ಹೇಳಿಕೊಂಡಿದೆ.

ಇದರೊಂದಿಗೆ ಸರ್ಕಾರ ನೇರವಾಗಿ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ಕೊಡುತ್ತಿದೆ. ನೇಮಕಾತಿ ಪರೀಕ್ಷೆಯಲ್ಲೂ ಸಹ ಕಲೆಕ್ಷನ್ಗೆ ಇಳಿದಿದೆ. ಕರ್ನಾಟಕ 30 ವರ್ಷಗಳ ಹಿಂದಿನ `ಆ ದಿನಗಳ ಗ್ರಹಣ’ ಇದೀಗ ಸಿದ್ದರಾಮಯ್ಯರವರ ಸರ್ಕಾರದ ಕೃಪೆಯಿಂದ ಕರ್ನಾಟಕಕ್ಕೆ ಮತ್ತೊಮ್ಮೆ ಬಂದಿದೆ ಎಂದು ಬಿಜೆಪಿ ಕಿಡಿಕಾರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!