ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಅವರ ಮೈಸೂರು ನಿವಾಸದ ವಾಸ್ತವ್ಯ ನಿನ್ನೆಗೆ ಕೊನೆಗೊಂಡಿದ್ದು, ಅನುಮತಿ ವಿಸ್ತರಣೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಟ ದರ್ಶನ್‌ಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠವೂ ಎರಡು ವಾರಗಳ ಕಾಲ ಮೈಸೂರಿನ ನಿವಾಸದಲ್ಲಿ ವಾಸ್ತವ್ಯದಲ್ಲಿರಲು ಕಾಲಾವಕಾಶ ನೀಡಿತ್ತು. ಆದರೆ ಈ ಕಾಲಾವಕಾಶ ಭಾನುವಾರ(ಜನವರಿ.5) ದಿನದಂದೇ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಮುಂದುವರಿಕೆಗೆ ಅನುಮತಿ ವಿಸ್ತರಣೆ ಮಾಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಚಾರವಾಗಿ ತಮ್ಮ ವಕೀಲರೊಂದಿಗೆ ಚರ್ಚಿಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಹೀಗಾಗಿ ಕೆಲ ವಾರಗಳ ಕಾಲ ಮೈಸೂರಿನಲ್ಲಿಯೇ ಉಳಿಯಲು ಅನುಮತಿ ನೀಡುವಂತೆ ದರ್ಶನ್ ಪರ ವಕೀಲರು ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಸಂಕ್ರಾತಿ ನಂತರ ಶಸ್ತ್ರಚಿಕಿತ್ಸೆ ನಿರ್ಧಾರ
ನಟ ದರ್ಶನ್‌ಗೆ ಕಾಲು ಮತ್ತು ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಮಾತ್ರ ಬೆನ್ನು ಮತ್ತು ಕಾಲು ನೋವಿನ ಸಮಸ್ಯೆಯಿಂದ ಗುಣಮುಖರಾಗಲು ಸಾಧ್ಯ ಎಂದು ಸಲಹೆ ನೀಡಿದ್ದರು. ಹೀಗಾಗಿ ವೈದ್ಯರ ಸಲಹೆಯಂತೆ ಸಕ್ರಾಂತಿ ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.





