Mysore
17
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಶಾಸಕ ರಾಯರೆಡ್ಡಿ ಹೇಳಿಕೆಯಿಂದ ಮುಜುಗರ ಆಗಿದೆ: ಎಂಬಿ ಪಾಟೀಲ್‌

ಬೆಂಗಳೂರು: ಭ್ರಷ್ಟಚಾರದಲ್ಲಿ ಕರ್ನಾಟಕ ನಂ.1 ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ ಅವರ ನಡೆ ಸರಿಯಲ್ಲ. ಅವರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಯರೆಡ್ಡಿ ಹೇಳಿಕೆ ಸಮಂಜಸವಲ್ಲ. ಈ ರೀತಿಯ ಹೇಳಿಕೆಯನ್ನು ಪಕ್ಷ ಸಹಿಸುವುದಿಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕಾಂಗ್ರೆಸ್‌ ವರಿಷ್ಠರು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರು ಗಮನಿಸುತ್ತಿದ್ದಾರೆ. ಖಂಡಿತವಾಗಿ ಬಸವರಾಜ ರಾಯರೆಡ್ಡಿ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದರು.

ಬಸವರಾಜ ರಾಯರೆಡ್ಡಿ ಯಾರ ವಿರುದ್ಧ ಆರೋಪ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ರಾಜ್ಯದಲ್ಲಿ ಭ್ರಷ್ಚಾಚಾರದಲ್ಲಿ ತೊಡಗಿರುವವರು ಯಾರು ಎಂಬುದು ಅವರಿಗೆ ಗೊತ್ತಿದ್ದರೆ ಬಹಿರಂಗಪಡಿಸಲಿ ಎಂದು ಎಂ.ಬಿ ಪಾಟೀಲ್‌ ಆಗ್ರಹಿಸಿದರು.

Tags:
error: Content is protected !!