Mysore
17
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಲೋಕ ಚುನಾವಣೆ: ಮೈಸೂರು-ಬೆಂಗಳೂರು ಹೈವೆಯಲ್ಲಿ ವಾಹನಗಳ ತಪಾಸಣೆ!

ಮೈಸೂರು: ಇದೇ ಏಫ್ರಿಲ್‌ 19ರಿಂದ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಅತ್ಯಂತ ಕಠಿಣ ಕ್ರಮಗಳನ್ನು ರೂಪಿಸಿದೆ. ಹಣ, ಮಾದಕ ವಸ್ತು, ಆಮಿಷಗಳನ್ನು ತಡೆಯಲು ಹಲವಾರು ಕಾರ್ಯಪಡೆಗಳನ್ನು ನಿಯೋಜಿಸಿದ್ದು, ನಿನ್ನೆಯಿಂದಲೇ (ಮಾ.೧೬) ಚುನಾವಣಾ ನೀತಿ ಸಂಹಿತೆ ರಾಜ್ಯಾದ್ಯಂತ ಜಾರಿಯಾಗಿದೆ.

ಇಂದು (ಮಾ.೧೭) ಬೆಂಗಳೂರು-ಮೈಸೂರು ಹೆದ್ದಾರಿಯ ಹೆಜ್ಜಾಲ ಬಳಿಯ ಕಣಮಿಣಕೆ ಟೋಲ್ ಬಳಿ ಬ್ಯಾರಿಕೇಡ್ ಅಳವಡಿಸಿ ಬಿಡದಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.

ವಾಹನಗಳನ್ನು ನಿಲ್ಲಿಸಿ ಓರಲ್ ಚೆಕ್ಕಿಂಗ್, ವಾಹನದ ಡಿಕ್ಕಿ ತೆಗೆಸಿ ತಪಾಸಣೆ ಮಾಡಲಾಗುತ್ತಿದೆ. ಆ ಮೂಲಕ ಚುನಾವಣಾ ಅಕ್ರಮ ನಡೆಯದಂತೆ ಪೊಲೀಸರು ಹದ್ದಿನ ಕಣ್ಗಾವಲು ಇರಿಸಿದ್ದಾರೆ.

ಕಂದಾಯ ಅಧಿಕಾರಿಗಳ ಗೈರಿನಲ್ಲಿಯೂ ಸಹಾ ಪೊಲೀಸರಿಂದ ಚೆಕಿಂಗ್ ಕಾರ್ಯ ನಡೆಯುತ್ತಿದೆ. ಹೆಜ್ಜಾಲ ಚೆಕ್‌ಪೋಸ್ಟ್‌ ಬೆಂಗಳೂರು-ಮೈಸೂರು ಹೆದ್ದಾರಿಯ ಅತಿದೊಡ್ಡ ಚೇಕಿಂಗ್ ಪಾಯಿಂಟ್ ಆಗಿದೆ.

Tags:
error: Content is protected !!