Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವೃದ್ಧರು, ವಯಸ್ಕರು ಕಾರ್ಬೆವಾಕ್ಸ್ ಬೂಸ್ಟರ್ ಡೋಸ್ ಪಡೆಯಬಹುದು: ರಾಜ್ಯ ಸರ್ಕಾರ

ಬೆಂಗಳೂರು: ಕಳೆದ ಆರು ತಿಂಗಳಲ್ಲಿ 18 ವರ್ಷ ತುಂಬಿದವರೂ ಸಹ ಬೂಸ್ಟರ್ ಡೋಸ್ ಅಥವಾ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.  ವ60ರ್ಷ ಮೇಲ್ಪಟ್ಟವರು ಮತ್ತು ಸಹವರ್ತಿ ರೋಗಿಗಳಿಗೆ ಮಾತ್ರ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಇದರ ಜೊತೆಗೆ ತಜ್ಞರು ಮತ್ತು ತಾಂತ್ರಿಕ ಸಮಿತಿ ಸದಸ್ಯರು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಬಹುದೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್, 15ರಿಂದ 17 ವರ್ಷದೊಳಗಿನವರು ಮತ್ತು ಇತ್ತೀಚೆಗೆ 18 ವರ್ಷ ತುಂಬಿದವರು ಈ ಲಸಿಕೆಯನ್ನು ಮುನ್ನೆಚ್ಚರಿಕೆಯಾಗಿ ಲಸಿಕೆಯನ್ನು ಪಡೆಯಹುದಾಗಿದೆ.

18 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯ ಮೇಲೆ ಲಸಿಕೆಯನ್ನು ನೀಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿಲ್ಲ. ಆದಾಗ್ಯೂ, ಬೂಸ್ಟರ್ ಡೋಸ್ ತೆಗೆದುಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿಲ್ಲ. ಸಂಗ್ರಹಿಸಲಾದ 30,000 ಬಾಟಲ್‌ ಗಳ ಮುಕ್ತಾಯ ದಿನಾಂಕ ಮಾರ್ಚ್ ಆಗಿರುವುದರಿಂದ, ಮುಂಬರುವ ದಿನಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡುವ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಹೇಳಿದರು.

ಹೆಸರು ಹೇಳಲು ಇಚ್ಛಿಸದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, Corbevax ಲಸಿಕೆ ಸೂಕ್ತವಾಗಿದೆ. ಇದನ್ನು ಪ್ರಾಥಮಿಕ ಲಸಿಕೆಯಾಗಿಯೂ ಬಳಸಬಹುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ರಾಜ್ಯದಲ್ಲಿ ಲಸಿಕೆಗಳ ಕೊರತೆಯಿಂದಾಗಿ, ಇದನ್ನು ಶೇಕಡಾ 23ರಿಂದ 25ರಷ್ಟು ಜನಸಂಖ್ಯೆಗೆ ಸೀಮಿತಗೊಳಿಸುತ್ತಿದೆ ಎಂದರು.

ಇದನ್ನು ಫ್ಲೂ ಲಸಿಕೆಯಾಗಿಯೂ ಬಳಸಬಹುದು. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಟ್ಟುನಿಟ್ಟಾದ ವೈದ್ಯರ ಮೇಲ್ವಿಚಾರಣೆಯಲ್ಲಿ ನೀಡುವುದು ಸುರಕ್ಷಿತವಾಗಿದೆ. ಇದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದಿತ ಲಸಿಕೆಯಾಗಿದೆ. ಆದರೆ ಇದೆಲ್ಲದರ ಹೊರತಾಗಿಯೂ, ರಾಷ್ಟ್ರೀಯ ಪ್ರತಿರಕ್ಷಣಾ ತಾಂತ್ರಿಕ ಸಲಹಾ ಗುಂಪು (NITG) ನಿರ್ಬಂಧಗಳನ್ನು ವಿಧಿಸಿದೆ. ಇದರ ಪ್ರತ್ಯಕ್ಷ ಮಾರಾಟವನ್ನೂ ನಿಲ್ಲಿಸಲಾಗಿದೆ. ಈ ಲಸಿಕೆಯನ್ನು ಎಲ್ಲರಿಗೂ ಪ್ರಾಥಮಿಕ ಲಸಿಕೆಯಾಗಿ ನೀಡಬಹುದು. ಇದು ಭಿನ್ನಜಾತಿಯ ಬೂಸ್ಟರ್ ಕೂಡ ಆಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ