Mysore
23
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ರೈತ ಉತ್ಪಾದಕ ಸಂಸ್ಥೆಗಳ ಬಾಕಿ ಅನುದಾನ ಶೀಘ್ರ ಬಿಡುಗಡೆ: ಎನ್.ಚಲುವರಾಯಸ್ವಾಮಿ

ಬೆಳಗಾವಿ: ರಾಜ್ಯದಲ್ಲಿ ಜಲಾನಯನ ಇಲಾಖೆ ವತಿಯಿಂದ ಸ್ಥಾಪಿಸಲಾಗಿರುವ ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಇರುವ ಅನುದಾನವನ್ನು ಆದಷ್ಟು ಶೀಘ್ರ ಒದಗಿಸುವುದಾಗಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆ ಸದಸ್ಯ ಅರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಧಿಪಡಿಸಿದ ಅನುದಾನ ಪೂರ್ಣವಾಗಿ ಬಿಡುಗಡೆಯಾಗದೇ ಕೊರತೆ ಉಂಟಾಗಿದೆ. ಆದರೆ ನಮ್ಮ ಸರ್ಕಾರ ರೈತ ಪರವಾಗಿದ್ದು, ಆದಷ್ಟು ಹೆಚ್ಚಿನ ಅನುದಾನವನ್ನು ಈ ವರ್ಷದ ಹಣಕಾಸು ವರ್ಷದಲ್ಲೇ ಬಿಡುಗಡೆ ಮಾಡಲಾಗುವುದು. ಉಳಿಕೆ ಹಣವನ್ನು ಮುಂದಿನ ಹಣಕಾಸಿನ ವರ್ಷದಲ್ಲಿ ಹೊಂದಾಣಿಕೆ ಮಾಡಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆಯಡಿ ಬೇಡಿಕೆ ಮತ್ತು ಬಿಡುಗಡೆಯಾದ ಅನುದಾನದ ವಿವರಗಳು

2021-22
ಒಟ್ಟು ಗುರಿ 750 ಎಫ್.ಪಿ.ಒ ಅನುದಾನದ ಗುರಿ 225 ಕೋಟಿಗಳು
ರಚನೆಯಾದ ಎಫ್.ಪಿ.ಒ 330 ಸಂಖ್ಯೆ
ಪ್ರಥಮ ವರ್ಷಕ್ಕೆ ಬೇಕಾದ ಅನುದಾನ 330*8.75 ಲಕ್ಷಗಳು = 28.88 ಕೋಟಿಗಳು
ಬಿಡುಗಡೆಯಾದ ಅನುದಾನ 10.35 ಕೋಟಿಗಳು
ಬಾಕಿ 18.53 ಕೋಟಿಗಳು

2022-23
ಕಳೆದ ವರ್ಷ 2021-22ರ ಬಾಕಿ 18.53 ಕೋಟಿಗಳು
ಕಳೆದ ವರ್ಷ ರಚಿಸಿದ (2021-22) 330 ಸಂಘಗಳ 2ನೇ ವರ್ಷದ ಬೇಡಿಕೆ 330*12.09 ಲಕ್ಷಗಳು = 39.89 ಕೋಟಿಗಳು
2022-23ನೇ ಸಾಲಿನಲ್ಲಿ ರಚನೆಯಾದ 156 ಸಂಘಗಳ ಮೊದಲನೇ ವರ್ಷದ ಬೇಡಿಕೆ 156*8.75 ಲಕ್ಷಗಳು = 13.65 ಕೋಟಿಗಳು
2021-22ನೇ ಸಾಲು ಸೇರಿದಂದ 2022-23ನೇ ಸಾಲಿಗೆ ಬೇಕಾದ ಒಟ್ಟು ಅನುದಾನ 72.07 ಕೋಟಿಗಳು
ಬಿಡುಗಡೆಯಾದ ಅನುದಾನ 33.98 ಕೋಟಿಗಳು
ಬಾಕಿ ಅನುದಾನ 38.98 ಕೋಟಿಗಳು

2023-24 (ಯಾವುದೇ ಹೊಸ ಸಂಘ ರಚನೆಯಾಗಿರುವುದಿಲ್ಲ)
ಕಳೆದ ವರ್ಷ 2022-23ರ ಬಾಕಿ 38.98 ಕೋಟಿಗಳು
2021-22ನೇ ಸಾಲಿನಲ್ಲಿ ರಚಿಸಿದ 330 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 330*9.16 ಲಕ್ಷಗಳು = 30.22 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 2ನೇ ವರ್ಷದ ಬೇಡಿಕೆ 156*12.09 ಲಕ್ಷಗಳು = 18.86 ಕೋಟಿಗಳು
2023-24ನೇ ಸಾಲಿನ ಒಟ್ಟು ಬೇಡಿಕೆ 88.16 ಕೋಟಿಗಳು
ಬಿಡುಗಡೆಯಾದ ಅನುದಾನ 4.0 ಕೋಟಿಗಳು
ಬಾಕಿ 84.16 ಕೋಟಿಗಳು

2024-25
ಕಳೆದ ವರ್ಷದ ಬಾಕಿ(2023-24) 84.16 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 156*9.16 ಲಕ್ಷಗಳು = 14.28 ಕೋಟಿಗಳು
ಒಟ್ಟು ಬೇಡಿಕೆ 98.44 ಕೋಟಿಗಳು
ಬಿಡುಗಡೆ 1.16 ಕೋಟಿಗಳು
ಬಾಕಿ 97.28 ಕೋಟಿಗಳು

97.28 ಕೋಟಿಗಳ ಬಾಕಿ ಬೇಡಿಕೆಯಲ್ಲಿ 2024-25ನೇ ಸಾಲಿಗೆ ರೂ.54 ಕೋಟಿಗಳ ಅನುದಾನ ಬೇಡಿಕೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ.

ಉಳಿದ ಬಾಕಿ ಬೇಡಿಕೆ ರೂ.43 ಕೋಟಿಗಳನ್ನು ಮುಂದಿನ ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಅಂತಿಮವಾಗಿ ಪಡೆದು ಸಂಘಗಳ ಪ್ರಗತಿಯನ್ನು ಪರಿಶೀಲಿಸಿ ವೆಚ್ಚ ಭರಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು

Tags:
error: Content is protected !!