Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದುನಿಯಾ ವಿಜಯ ಡಿವೋರ್ಸ್‌ ಅರ್ಜಿ ವಜಾ

ಬೆಂಗಳೂರು:  ತಮ್ಮ ಮೊದಲನೇ ಪತ್ನಿ ನಾಗರತ್ನರಿಂದ  ವಿಚ್ಚೇದನಾ ಪಡೆಯಲು ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇಂದು(ಜೂ.13) ವಜಾಗೊಳಿಸಿದೆ.

ಪತ್ನಿ  ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ ಎಂದು ನಟ ದುನಿಯಾ ವಿಜಯ್ ವಿಚ್ಛೇದನಾ ಕೋರಿ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಆದರೆ ಪತ್ನಿ ನಾಗರತ್ನ, ನನಗೆ ಗಂಡ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. ನಾಗರತ್ನ ವಿರುದ್ಧದ ಆರೋಪಗಳಿಗೆ ಸೂಕ್ತ ಸಾಕ್ಷ್ಯಧಾರ ಇಲ್ಲದ ಹಿನ್ನಲೆಯಲ್ಲಿ ಚಿತ್ರನಟ ದುನಿಯಾ ವಿಜಯ್ ವಿಚ್ಛೇದನಾ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಈಗಾಗಲೇ ದುನಿಯಾ ವಿಜಯ್ ಅವರು ಕೀರ್ತಿ ಎನ್ನುವವರನ್ನು ಮದುವೆಯಾಗಿ ಇವರ ಜೊತೆ ಜೀವನ ನಡೆಸುತ್ತಿದ್ದಾರೆ. ನಾಗರತ್ನ ಅವರು ಗಂಡ ಬೇಕು ಎಂದು ಹಠ ಹಿಡಿದಿದ್ದರು. ಈಗಾಗಲೇ ನಾಗರತ್ನ ಅವರಿಂದ ದೂರ ಆಗಿ ದುನಿಯಾ ವಿಜಯ್ ಅವರು ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು 2018ರಲ್ಲಿ ಅರ್ಜಿ ಸಲ್ಲಿಸಿದ್ದರು. 6 ವರ್ಷಗಳಿಂದ ಈ ಪ್ರಕರಣ ನಡೆಯುತ್ತಿತ್ತು. 2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಅವರು “ನಾಗರತ್ನ ಜೊತೆ ಬದುಕಲು ಸಾಧ್ಯವಿಲ್ಲ. ಮಕ್ಕಳ ಜವಾಬ್ದಾರಿ ನಾನೇ ತಗೊಳ್ಳುವೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ” ಎಂದು ಹೇಳಿದ್ದರು. ನಾಗರತ್ನ ಅವರು “ಜೀವನಾಂಶ ನೀಡಿರುವುದಕ್ಕೆ ದಾಖಲೆ ಕೊಡಿ” ಎಂದು ಹೇಳಿದ್ದರು.

ದುನಿಯಾ ವಿಜಯ್ ಹಾಗೂ ನಾಗರತ್ನ ದಂಪತಿಗೆ ರಿತನ್ಯ, ಮೊನಿಶಾ, ಸಾಮ್ರಾಟ್ ಎಂಬ ಮಕ್ಕಳಿದ್ದಾರೆ. ಮೊನಿಶಾ ಅವರು ನ್ಯೂಯಾರ್ಕ್‍ನಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಮಾಡುತ್ತಿದ್ದಾರೆ. ಸಾಮ್ರಾಟ್ ಸದ್ಯ ಶಿಕ್ಷಣ ಪಡೆಯುತ್ತಿದ್ದಾರೆ.

Tags: