Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಚುನಾವಣೆ ಏನಿದ್ದರು ನಮ್ಮ ತತ್ವ ಸಿದ್ದಾಂತದ ಮೇಲೆ ನಡೆಯಬೇಕು: ಅಭಿಮಾನಿ ಮೇಲಿನ ಹಲ್ಲೆಗೆ ಸಿಎನ್‌ಎಂ ಕಿಡಿ!

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಿದ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ ಖಂಡಿಸಿದ್ದಾರೆ.

ಚನ್ನಪಟ್ಟಣ ತಲೂಕಿನ ಹೊಂಗನೂರಿನಲ್ಲಿ ಮಾತನಾಡಿರುವ ಅವರು, ಇದು ನಮ್ಮ ಸಂಸ್ಕೃತಿಯಲ್ಲ. ಚುನಾವಣೆ ಏನಿದ್ದರು ನಮ್ಮ ತತ್ವ ಸಿದ್ದಾಂತದ ಮೇಲೆ ನಡೆಯಬೇಕು ಚುನಾವಣೆ ಅವರ ವಿರುದ್ಧವಾಗಿ ಸಾಗುತ್ತಿದೆ ಎಂಬ ಹತಾಶೆಯಿಂದ ಈ ರೀತಿಯ ಕೃತ್ಯ ಮಾಡಿರಬೇಕು. ಚುನಾವಣೆಯಲ್ಲಿ ಸಿದ್ದಾಂತದ ಮೇಲೆ ಎದುರಿಸಬೇಕು ಕೃತ್ಯಗಳ ಮೂಲಕವಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಈಗಾಗಲೇ ಡಿಐಜಿ ಜೊತೆ ಚರ್ಚಿಸಿದ್ದೇನೆ. ಚುನಾವಣೆಯನ್ನು ಆರೋಗ್ಯಕರವಾಗಿ ಎದುರಿಸುವುದು ಬಿಟ್ಟು ಈ ರೀತಿ ಅಡ್ಡದಾರಿ ಹಿಡಿಯಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಡಾಕ್ಟರ್‌ ವರ್ಸ್‌ ಡಾಕು ಎಂಬ ಪದ ಬಳಕೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಅವರು, ವಯಕ್ತಿಕ ಟೀಕೆಗಳನ್ನು ಚುನಾವಣೆಯಲ್ಲಿ ಮಾಡುವುದು ಸರಿಯಲ್ಲ. ನಮ್ಮ ಸಿದ್ಧಾಂತದ ಆಧಾರದಲ್ಲಿ ಪ್ರಚಾರ ಮಾಡಿ ಎಂದು ಮನವಿ ಮಾಡಿದರು.

Tags: