ಬೆಂಗಳೂರು: ಶಾಸಕರನ್ನು ವೈರಿಗಳಂತೆ ನೋಡಬೇಡಿ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಮೊಗಸಾಲೆಯಲ್ಲಿ ಸುಖಾಸೀನ ಕುರ್ಚಿಗಳನ್ನು ಹಾಕಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ವಯಸ್ಸಾದ ಶಾಸಕರು ಇದ್ದಾರೆ. ಅವರ ಅನುಕೂಲಕ್ಕೆ ಹಾಕಲಾಗಿದೆ ಎಂದು ಸಮರ್ಥಿಸಿಕೊಂಡರು.
ವಿಧಾನಸೌಧದ ಆವರಣದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಪುಸ್ತಕ ಮೇಳದಿಂದ ಕಸವಾಗಿದ್ದರೆ, ಅದನ್ನು ಸ್ವಚ್ಛ ಮಾಡುತ್ತೇವೆ. ಪುಸ್ತಕ ಮೇಳದ ಖರ್ಚು ವೆಚ್ಚ ನೋಡುವ ಕೆಲಸ ನಮದಲ್ಲ. ಪುಸ್ತಕ ಮೇಳ ನಡೆಸಬೇಕೆಂಬುದನ್ನು ಹೇಳಿದ್ದೆ. ಯಾವ ರೀತಿ ಮೇಳ ಆರಂಭಿಸಬೇಕೆಂಬುದನ್ನು ತಿಳಿಸಲಾಗಿತ್ತು. ಲೆಕ್ಕದ ವಿಚಾರವನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸುವುದಾಗಿ ಹೇಳಿದರು.





