Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸಿಎಂ ಸಿದ್ದರಾಮಯ್ಯ ಹಿಂದೂ ದೇವರುಗಳಿಗೆ ಅಪಮಾನ ಮಾಡುತ್ತಿದ್ದಾರೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ

ಬಾಗಲಕೋಟೆ: ಯಾವುದೇ ಕಾರಣಕ್ಕೂ ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ.

ಚೌತಿ ಗಣಪತಿ ಪ್ರಸಾದ ಪರೀಕ್ಷೆ ಮಾಡಿ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ. ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಟ ಭಾವನೆ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲಾ ಗಣಪತಿ ಕೂರಿಸಲಾಗುತ್ತದೆ. ಕಾಂಗ್ರೆಸ್‌ ಪಕ್ಷ ಹುಟ್ಟೋಕ್ಕಿಂತ ಮುಂಚೆ ದೇಶದಲ್ಲಿ ಗಣಪತಿ ಕೂರಿಸಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿದೆ ಎಂದು ಕಿಡಿಕಾರಿದರು.

ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದಿದ್ದಾರೆ. ನೀವು ಮಸೀದಿ, ಚರ್ಚ್‌ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ನಮ್ಮ ದೇಶದ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜಕಾರಣ ಬಹಳ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷ  ಭ್ರಷ್ಟಾಚಾರ ಮಾಡಿರುವುದಕ್ಕೆ ವಿರೋಧ ಪಕ್ಷ ಆಪಾದನೆ ಮಾಡೋದು ತಪ್ಪಲ್ಲ. ಈಗಿನ ಸರ್ಕಾರದ ಸ್ಥಿತಿ ನೋಡಿದರೆ ನಾವು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಬಾರದು ಅಂತ ತೀರ್ಮಾನ ಮಾಡುವ ಸ್ಥಿತಿ ಎದುರಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

Tags: