Mysore
26
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಬೇಸರಗೊಳ್ಳಬೇಡ ಕೃಷ್ಣ ಮಥುರಾದಲ್ಲಿ ನಿನ್ನ ಮಂದಿರವೂ ಕಟ್ಟುತ್ತಾರೆ!

ಜ.೨೨ರಂದು ಸುಮಾರು ೫೦೦ ವರ್ಷಗಳ ರಾಮಭಕ್ತರ ಕನಸು ನನಸಾಗುತ್ತಿದೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಭಾರತದ ಬಹುಸಂಖ್ಯಾತ ಹಿಂದುಗಳ ಕನಸಾಗಿತ್ತು. ಇದೀಗ ಈ ಕನಸು ನನಸಾಗುತ್ತಿದೆ.

ರಾಮ ಮಂದಿರ ಉದ್ಘಾಟನೆಗೆ ದೇಶವೇ ಸಜ್ಜಾಗಿದ್ದು, ದೇಶ-ವಿದೇಶದಲ್ಲಿರುವ ಕೋಟ್ಯಾಂತರ ರಾಮ ಭಕ್ತರು ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದು ತುಂಬಾ ವೈರಲ್‌ ಆಗಿದೆ. ಬೇಸರಗೊಂಡಿರುವ ಬಾಲಗೋಪಾಲನನ್ನು ತಾಯಿ ಯಶೋಧೆ ಸಂತೈಸುತ್ತಿರವ ಫೋಟೊ ಹೆಚ್ಚೆಚ್ಚು ವೈರಲ್ಲಾಗಿದೆ.

ರಾಮಮಂದಿರ ನಿರ್ಮಾಣವಾಗಿರುವುದಕ್ಕೆ ಬೇಸರಗೊಂಡಿರುವ ಬಾಲ ಕೃಷ್ಣ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣವಾಗದಿರಲು ಬೇಸರಗೊಂಡಿದ್ದು, ಆತನನ್ನು ತಾಯಿ ಯಶೋಧೆ ʼಬೇಸರಗೊಳ್ಳಬೇಡ ಕೃಷ್ಣ. ಮೋದಿ, ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡುತ್ತಾರೆʼ ಎಂದು ಸಂತೈಸುತ್ತಿರುವುದಾಗಿ ವರ್ಣನೆ ಮಾಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!