Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಹೇಳಿಕೆ ಕೊಡೋರು ಹಿಂದೆ ತಿರುಗಿ ಅವರ ಬೆನ್ನನ್ನು ನೋಡಿಕೊಳ್ಳಬೇಕಾಗುತ್ತೆ : ರಾಜಣ್ಣ ವಿರುದ್ಧ ಡಿಕೆಎಸ್ ವಾಗ್ದಾಳಿ

ರಾಮನಗರ : ಯಾರೂ ಶಾಶ್ವತ ಅಲ್ಲ, ಯಾವ ಹುದ್ದೆ ಕೂಡ ಶಾಶ್ವತ ಅಲ್ಲ. ಹೇಳಿಕೆ ಕೊಡುವವರೂ ಹಿಂದೆ ತಿರುಗಿ ನೋಡಿಕೊಳ್ಳಬೇಕು. ಹಿಂದೆ ತಿರುಗಿ ಅವರ ಬೆನ್ನನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಕೆ ಎನ್‌ ರಾಜಣ್ಣ ವಿರುದ್ಧ ಮಾಜಿ ಸಂಸದ ಡಿ.ಕೆ ಸುರೇಶ್‌ ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬಿಟ್ಟುಕೊಡಬೇಕೆಂಬ ಸಚಿವ ಕೆಎನ್​ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,  ಡಿಕೆ ಶಿವಕುಮಾರ್‌ ಅವರನ್ನ ಯಾರೂ ಟಾರ್ಗೆಟ್‌ ಮಾಡಲು ಆಗಲ್ಲ. ಅವರನ್ನು ಟಾರ್ಗೆಟ್ ಮಾಡುತ್ತೇನೆ ಅಂದರೆ ಅದು ಅವರ ಭ್ರಮೆ. 35 ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದಾರೆ ಹೊರತು ಯಾರದ್ದೋ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರಲ್ಲ. ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು ಡಿಕೆಶಿ ಎಂದು ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ.

ಅಲ್ಲದೆ ಉತ್ತಮವಾದ ಆಡಳಿತ ನಡೆಸಲಿ ಎಂದು ಹೈಕಮಾಂಡ್‌ ಜವಾಬ್ದಾರಿ ನೀಡಿದ್ದಾರೆ. ಡಿಕೆಶಿವಕುಮಾರ್‌ ಗೆ  ಯೋಗ್ಯತೆ ಇಲ್ಲ ಎನ್ನುವುದಾದರೆ ಚುನಾವಣೆಗೆ ಹೋಗುವುದು ವಾಸಿ, ನಾವೆಲ್ಲರೂ ಚುನಾವಣೆಗೆ ಹೋಗೋಣ ಎಂದಿದ್ದಾರೆ. ಡಿ.ಕೆ‌ ಶಿವಕುಮಾರ್ ಗೆ ಜವಾಬ್ದಾರಿ ಕೊಟ್ಟಿರುವುದು ವರಿಷ್ಠರು. ಅವರ ಮುಂದೆ ಎಲ್ಲವನ್ನು ತಿಳಿಸಿದ್ದಾರೆ. ವರಿಷ್ಠರು ಹೇಳಿರುವುದನ್ನ ಇತರರಿಗೆ ತಿಳಿಸಲು ಸಾಧ್ಯವಾಗುವುದಿಲ್ಲ ಎಂದರು

 

Tags:
error: Content is protected !!