Mysore
26
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಹಾಲಿನ ಡೈಲಿ ರಾಜಕೀಯಕ್ಕೆ ಡಿಕೆ ಸುರೇಶ್‌ ಎಂಟ್ರಿ ; ಬಮೂಲ್‌ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಬೆಂಗಳೂರು : ಮಾಜಿ ಸಚಿವ ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರು ಹಾಲು ಒಕ್ಕೂಟಕ್ಕೆ ಕನಕಪುರ ತಾಲ್ಲೂಕಿನ ನಿರ್ದಿಷ್ಟ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಪ್ರತಿದಿನ ಜಿದ್ದಾಜಿದ್ದಿ ರಾಜಕಾರಣ ಹೆಚ್ಚುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ತಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ತಯಾರಿಯಲ್ಲಿದ್ದಾರೆ. ಇದಕ್ಕೆ ಪ್ರತಿಯಾಗಿ ಖುದ್ದು ಡಿ.ಕೆ.ಸುರೇಶ್‍ರವರೇ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಮುಂದಿನ ಜೂನ್ ವೇಳೆಗೆ ಹಾಲಿ ಕೆಎಂಎಫ್ ಅಧ್ಯಕ್ಷ ಭಿಮಾನಾಯಕ್ ಅವರ ಅಧಿಕಾರವಧಿ ಮುಗಿಯುತ್ತಿದೆ. ಕಳೆದ 10 ವರ್ಷಗಳಿಂದಲೂ ಕೆಎಂಎಫ್ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. ಹೆಚ್.ಡಿ.ರೇವಣ್ಣ ಹಾಗೂ ಸದಾನಂದಗೌಡರಂತಹ ಘಟಾನುಘಟಿಗಳು ಕೆಎಂಎಫ್‍ನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ರಾಜ್ಯದಲ್ಲಿ ಕೆಎಂಎಫ್ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಅದರ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಸುರೇಶ್ ಸಹಕಾರ ಕ್ಷೇತ್ರದ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಕನಕಪುರ ತಾಲ್ಲೂಕು ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಜಿಲ್ಲಾ ಡೈರಿಯ ಅಧ್ಯಕ್ಷರಾಗಿ ಅನಂತರ ಕೆಎಂಎಫ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದು ಡಿ.ಕೆ.ಸುರೇಶ್ ಅವರ ಇರಾದೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಜನ ನನಗೆ ವಿಶ್ರಾಂತಿ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ನಾನು ಯಾವುದೇ ಉದ್ಯೋಗದ ಆಕಾಂಕ್ಷಿಯಲ್ಲ. ವಿಶ್ರಾಂತ ಜೀವನ ನಡೆಸುತ್ತೇನೆ ಎಂದು ಡಿ.ಕೆ.ಸುರೇಶ್ ಘೋಷಿಸಿದ್ದರು. ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಭಾರಿ ಒತ್ತಡಗಳು ಬಂದಾಗಲೂ ಡಿ.ಕೆ.ಸುರೇಶ್ ಒಪ್ಪಿರಲಿಲ್ಲ. ಕೊನೆಗೆ ಬಿಜೆಪಿಯ ವಿಧಾನಪರಿಷತ್‍ನ ಸದಸ್ಯರಾಗಿದ್ದ ಸಿ.ಪಿ.ಯೋಗೇಶ್ವರ್ ಅವರನ್ನು ಕರೆತಂದು ಅಭ್ಯರ್ಥಿ ಮಾಡಲಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಪ್ರತಿ ಹಂತದಲ್ಲೂ ರಾಜಕೀಯವಾಗಿ ತಾವು ಯಾವುದೇ ಆಕಾಂಕ್ಷಿಯಲ್ಲ ಎಂದು ಪದೇಪದೇ ಡಿ.ಕೆ.ಸುರೇಶ್ ಹೇಳುತ್ತಿದ್ದರು. ಈಗ ಏಕಾಏಕಿ ಸಹಕಾರ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಕುತೂಹಲ ಕೆರಳಿಸಿದೆ.

Tags:
error: Content is protected !!