ಬೆಂಗಳೂರು: ಮೈಸೂರು ಚಾಮುಂಡಿಬೆಟ್ಟದ ವಿಚಾರವಾಗಿ ಡಿಸಿಎಂ ಡಿಕೆಶಿ ಹೇಳಿಕೆಯನ್ನು ಜೆಡಿಎಸ್ ಟೀಕೆ ಮಾಡಿದೆ.
ಚಾಮುಂಡಿಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ ಎಂದು ಡಿಕೆಶಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಜೆಡಿಎಸ್ ಪ್ರತಿಕ್ರಿಯೆ ನೀಡಿದ್ದು, ಆಪ್ತಮಿತ್ರ ಚಿತ್ರದಲ್ಲಿ ಗಂಗಾ ನಾಗವಲ್ಲಿಯಾಗಿ ಹಂತ ಹಂತವಾಗಿ ಬದಲಾಗುತ್ತಾಳೆ. ಆದರೆ ಡಿಕೆಶಿ ನಾಗವಲ್ಲಿಗಿಂತಲೂ ಬಹುಬೇಗನೇ ಬದಲಾಗುತ್ತಿದ್ದಾರೆ ಎಂದು ಟೀಕೆ ಮಾಡಿದೆ.





