Mysore
19
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಒಕ್ಕಲಿಗರ ಮಠ ಒಡೆದವರು ಯಾರೆಂದು ನಿರ್ಮಲ ಶ್ರೀಗಳಿಗೆ ಗೊತ್ತಿದೆ: ಡಿಕೆ ಶಿವಕುಮಾರ್‌

ಬೆಂಗಳೂರು: ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಶ್ರೀಗಳು ರಾಜಕಾರಣ ಮಾಡುವವರಲ್ಲ, ಅವರಿಗೆ ಎಲ್ಲವೂ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಿಜೆಪಿ ಜೆಡಿಎಸ್ ನಾಯಕರು ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು.

ಸ್ವಾಮೀಜಿಯವರು ಬಂದವರಿಗೆಲ್ಲ ಹಾರ ಹಾಕಿ ಆರ್ಶೀವಾದ ಮಾಡಿ ಕಳುಹಿಸುತ್ತಾರೆ. ಏನೇ ಇರಲಿ ಸ್ವಾಮೀಜಿ ಬುದ್ಧಿವಂತರು, ಇತಿಹಾಸ ಅವರಿಗೆ ಗೊತ್ತಿದೆ. ಈ ಹಿಂದೆ ಒಕ್ಕಲಿಗ ಮಠವನ್ನು ಒಡೆದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಒಕ್ಕಲಿಗರು ದಡ್ಡರಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಒಕ್ಕಲಿಗ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸಿದವರು ಜತೆ ಸೇರಿ ಒಕ್ಕಲಿಗ ಮಠಕ್ಕೆ ಭೇಟಿ ಕೊಟ್ಟು ಅವರಿಗೆ ಆರ್ಶಿವಾದ ಕೊಡಿಸಿರುವುದು ಕುಮಾರಸ್ವಾಮಿ ಅವರ ಅನುಕೂಲ ಸಿಂಧು ರಾಜಕಾರಣವನ್ನು ಜಗಜ್ಜಾಹೀರು ಮಾಡಿದೆ ಎಂದರು.

ಜೆಡಿಎಸ್‌ ನವರದ್ದು ಸಿದ್ದಾಂತ ರಾಜಕಾರಣವಲ್ಲ. ಅವರದು ಅನುಕೂಲ ರಾಜಕಾರಣ ಎಂದು ವ್ಯಂಗ್ಯವಾಡಿದರು. ಈ ಚುನಾವಣೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳು ಸೋಲುತ್ತಾರೆ. ಹಾಗೆಯೇ ಬಿಜೆಪಿ ಟಿಕೆಟ್ ಮೇಲೆ ಚುನಾವಣಾ ಕಣಕ್ಕಿಳಿದಿರುವ ಜೆಡಿಎಸ್ ಕುಟುಂಬದ ಅಭ್ಯರ್ಥಿಯೂ ಸೋಲುತ್ತಾರೆ. ಜನ ದಡ್ಡರಲ್ಲ ಜನಕ್ಕೆ ಎಲ್ಲವೂ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Tags:
error: Content is protected !!