ಪ್ರತ್ಯೇಕ ರಾಷ್ಟ್ರದ ಕುರಿತು ಡಿಕೆ ಸುರೇಶ್ ನೀಡಿದ ಹೇಳಿಕೆಗೆ ಬಿಜೆಪಿಯ ನಾಯಕರು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದು, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಇಂತಹ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಆಕ್ರೋಶ ಹೊರಹಾಕಿದ್ದರು.
ಈ ಕುರಿತು ಇಂದು ( ಫೆಬ್ರವರಿ 10 ) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು, ಕೆಎಸ್ ಈಶ್ವರಪ್ಪನ ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ, ನಮ್ಮ ಸುದ್ದಿಗೆ ಬಂದವರಿಗೆ ಒಂದೇ ಹಂತದಲ್ಲಿ ಸೆಟಲ್‌ಮೆಂಟ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
“ಈಶ್ವರಪ್ಪ ಕ್ಷಮೆ ಕೇಳಲಿ ಅಂತ ನಾನು ಹೇಳುತ್ತಿಲ್ಲ. ಅವರ ಒಂದು ರೌಂಡ್ ಸೆಟಲ್‌ಮೆಂಟ್ ಆಗಿದೆ. ಅಸೆಂಬ್ಲಿಯಲ್ಲಿ ಏನೋ ಮಾತನಾಡಿದ್ದರು. ನಮ್ಮ ತಂದೆಯನ್ನು ನೆನಪಿಸಿಕೊಂಡಿದ್ರು. ಇವಾಗ ಎಲ್ಲಿದ್ದಾರೆ ಈಶ್ವರಪ್ಪ? ನಮ್ಮ ಸುದ್ದಿಗೆ ಯಾರಾರು ಬಂದಿದ್ದಾರೋ ಅವರದ್ದೆಲ್ಲಾ ಒಂದೊಂದೇ ಹಂತದಲ್ಲಿ ಸೆಟಲ್‌ಮೆಂಟ್ ಆಗ್ತಿದೆ. ಗುಂಡಿಕ್ಕಿ ಕೊಲ್ಲಬೇಕು ಅಂತಾರೆ, ಕೊಲ್ಲಲಿ ಬಿಡಿ. ಈ ಬೆದರಿಕೆಗೆಲ್ಲಾ ಹೆದರೋ ರಕ್ತ ಅಲ್ಲ ಡಿಕೆ ಸುರೇಶ್ ಅವರದ್ದು” ಎಂದು ಹೇಳಿದರು.