ಬೆಂಗಳೂರು: ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ನಮ್ಮವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ.
ಇಂದು (ಫೆ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿರುವ ಕೆಲವು ನಾಯಕರಿಗೆ ಕಿತ್ತಾಟ ಶಮನವಾಗುವುದು ಇಷ್ಟವಿಲ್ಲ. ಆದ ಕಾರಣ ಹಿಂಬಾಗಿಲಿನಿಂದ ಗೊಂದಲ ಜೀವಂತವಾಗಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ನಾಯರ ಆರ್.ಅಶೋಕ್ ಅವರು ಪಕ್ಷದ ಗೊಂದಲ ನಿವಾರಿಸದೆ, ಸುಮ್ಮನೇ ತಟಸ್ಥವಾಗಿದ್ದಾರೆ.ಇದು ಸರಿಯಲ್ಲ, ಸಮಸ್ಯೆ ಬಗೆಹರಿಸಬೇಕು ಆಗಲೇ ಅವರ ಹುದ್ದೆಗೆ ಗೌರವ ಎಂದು ಹೇಳಿದ್ದಾರೆ.
ನಮ್ಮಲ್ಲಿ ಒಗ್ಗಟ್ಟು ಬಂದರೆ ದೆಹಲಿಯ ರೀತಿಯೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬಹುದು ಎಂದಿದ್ದಾರೆ.



