Mysore
29
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ನೀಡುವ ಬಗ್ಗೆ ಚರ್ಚೆ: ಸಚಿವ ಮುನಿಯಪ್ಪ

ಬೆಂಗಳೂರು: ನಗರದಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆ ಮುಂದುವರಿದಿದ್ದು, ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ಎಲ್‌ಪಿಜಿ ನೀಡಲು ಚರ್ಚಿಸುತ್ತೇವೆ ಎಂದು ಸಚಿವ ಮುನಿಯಪ್ಪ ಹೇಳಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 4 ಗಂಟೆಗೆ ಗ್ಯಾಸ್‌ ಸಿಲಿಂಡರ್‌ಗಳ ಜೊತೆ ಸಭೆ ಇದೆ. ಸಿಎಸ್‌ ಅವರ ನೇತೃತ್ವದಲ್ಲಿ ಸಭೆ ಮಾಡಲಾಗುತ್ತದೆ. ಅವರು ನಿಮಗೆ ಅಪ್‌ಡೇಟ್‌ ಮಾಡುತ್ತಾರೆ. ಕ್ರಮೇಣ ನಿಧಾನವಾಗಿ ಸಮಸ್ಯೆ ಬಗೆಹರಿಯುತ್ತದೆ. ಎರಡು ಕಾರ್ಗೋ ಹಡಗುಗಳು ಬಂದಿರುವುದರಿಂದ ಅನುಕೂಲ ಆಗುತ್ತದೆ ಎಂದು ಹೇಳಿದರು.

ಈಗಾಗಲೇ ವಾಣಿಜ್ಯ ಎಲ್‌ಪಿಜಿ ಸರಬರಾಜು ಕೊರತೆ ಹಿನ್ನೆಲೆ ಬೆಂಗಳೂರಿನಲ್ಲಿ ಅನೇಕ ಹೋಟೆಲ್‌ಗಳು ಮುಚ್ಚಿವೆ. ಇನ್ನೂ ಹಲವು ಹೋಟೆಲ್‌ಗಳು ತಮ್ಮ ಮನೆಯಲ್ಲಿ ಬದಲಾವಣೆ ಮಾಡಿದ್ದು, ಇಂಡಕ್ಷನ್‌ ಹಾಗೂ ಕಟ್ಟಿಗೆ ಮೂಲಕ ಅಡುಗೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

Tags:
error: Content is protected !!