ಮಂಗಳೂರು: ರಾಜ್ಯದಲ್ಲಿ ಭ್ರಾತೃತ್ವ ವಾತಾವರಣ ನಿರ್ಮಾಣ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಿಎಂ ಸಿದ್ದರಾಮಯ್ಯ ಅವರು ಡಿಸಿ ಹಾಗೂ ಸಿಇಓಗಳ ಸಭೆಯಲ್ಲಿ ದ್ವೇಷ ಭಾಷಣ ಪ್ರಚೋದನೆ ಮಾಡುವುದನ್ನು ದಮನ ಮಾಡಬೇಕು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಾಂತಿಯ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ.
ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಜನ ಶಾಂತಿ ಸುವ್ಯವಸ್ಥೆ ಬಯಸುತ್ತಿದ್ದಾರೆ. ಸುಮ್ಮನಿದ್ದರೆ ಇಂತಹ ಧ್ವನಿಗಳು ಹೆಚ್ಚಾಗುತ್ತವೆ. ಎರಡೂ ಕಡೆ ಸಂಘಟನೆ ಹಾಗೂ ಪ್ರಚೋದನೆ ಮಾಡುತ್ತಿದ್ದಾರೆ. ಅದರ ವಿರುದ್ಧ ವಿಶೇಷ ಕ್ರಮ ಆಗಬೇಕು. ಸದ್ಯದಲ್ಲೇ ಆಂಟಿ ಕಮ್ಯುನಲ್ ಫೋರ್ಸ್ ಕಾರ್ಮೋನ್ಮುಖ ಆಗುತ್ತದೆ ಎಂದು ತಿಳಿಸಿದರು.





