Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರೇಣುಕಾಸ್ವಾಮಿ ಕುಟುಂಬಕ್ಕೆ ಧ್ರುವ ಸರ್ಜಾ ಫ್ಯಾನ್ಸ್‌ ಬೆಂಬಲ; ಆ್ಯಕ್ಷನ್ ಪ್ರಿನ್ಸ್ ಹೇಳಿದ್ದೇನು?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಜೈಲು ಸೇರಿದೆ. ಈ ಹೈ ಪ್ರೊಫೈಲ್‌ ಕೇಸ್‌ನ ತನಿಖೆ ಶರವೇಗದಲ್ಲಿ ನಡೆಯುತ್ತಿದೆ.

ಕನ್ನಡ ಚಿತ್ರರಂಗವು ಮೃತ ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ನಿಂತಿದೆ. ಸದ್ಯ ಈ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವಾಗಲೇ, ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ಸ್ಯಾಂಡಲ್‌ವುಡ್‌ ಆಕ್ಷನ್‌ಪ್ರಿನ್ಸ್‌ ಧ್ರುವ ಸರ್ಜಾ ಅಭಿಮಾನಿಗಳು ನಿಂತಿದ್ದಾರೆ.

ಧ್ರುವ ಸರ್ಜಾ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್‌ ಹಾಗೂ ತಂಡ ಬುಧವಾರ(ಜೂ. 26) ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದೆ. ಈ ವೇಳೆ ನಟ ಧ್ರುವ ಸರ್ಜಾ ದೂರವಾಣಿ ಮೂಲಕ ರೇಣುಕಾಸ್ವಾಮಿ ಕುಟುಂಬಸ್ಥರ ಜೊತೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.

ರೇಣುಕಾಸ್ವಾಮಿ ಕುಟುಂಬದವರ ಜೊತೆ ಮಾತನಾಡಿದ ನಟ ಧ್ರುವ ಸರ್ಜಾ, ನಿಮ್ಮೊಂದಿಗೆ ಸದಾ ನಾವು ಇದ್ದೀವಿ. ಏನೇ ಇದ್ದರೂ ನಮಗೆ ತಿಳಿಸಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಮಗನ ಸಾವಿನಲ್ಲಿ ದಿನದೂಡುತ್ತಿರುವ ರೇಣಕುಸ್ವಾಮಿ ಕುಟುಬಂಕ್ಕೆ ಧ್ರುವಸರ್ಜಾ ಅಭಿಮಾನಿಗಳು ಧನಸಹಾಯ ಮಾಡಿದ್ದಾರೆ.

 

 

 

Tags: