Mysore
26
broken clouds

Social Media

ಭಾನುವಾರ, 25 ಜನವರಿ 2026
Light
Dark

ಧರ್ಮಸ್ಥಳ ಎಸ್‌ಐಟಿ ತನಿಖೆ; ರಾಜಕೀಯ ಬೇಡ: ಡಿಕೆಶಿ

ಬೆಂಗಳೂರು : ಅನಾಮಿಕ ವ್ಯಕ್ತಿಯೊಬ್ಬ ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿರುವುದಾಗಿ ಹೇಳಿರುವ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿರುವ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.

ನಿಯಮ ೬೯ರಡಿ ವಿ.ಸುನೀಲ್‌ಕುಮಾರ್ ವಿಷಯ ಪ್ರಸ್ತಾಪಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿಮಗಿಂತ ಹೆಚ್ಚು ನಮ್ಮ ಶಾಸಕರು ಗೌರವ ಹೊಂದಿದ್ದಾರೆ. ನಮ್ಮ ಶಾಸಕಾಂಗ ಸಭೆಯಲ್ಲೂ ಭಕ್ತ-ಭಗವಂತನ ನಡುವಿನ ಸಂಬಂಧ ಹಾಳಾಗಬಾರದು ಎಂಬ ಚರ್ಚೆಯಾಗಿದೆ ಎಂದರು.

ಮಾತು ಬಿಡದ ಧರ್ಮಸ್ಥಳದ ಮಂಜುನಾಥ, ಕಾಸು ಬಿಡದ ತಿಮಪ್ಪ ಎಂಬ ಮಾತಿದೆ. ಧರ್ಮಸ್ಥಳದ ಬಗ್ಗೆ ನನಗೆ ನಂಬಿಕೆ, ಭಕ್ತಿ ಇದೆ. ಲಕ್ಷಾಂತರ ಭಕ್ತರು ಆರಾಧಿಸುತ್ತಾರೆ. ಅಲ್ಲಿ ಅನ್ನದಾಸೋಹ ನಡೆಯುತ್ತದೆ. ಅಲ್ಲಿ ನಡೆಯುತ್ತಿರುವ ಸೇವೆ ಬಗ್ಗೆ ಅನುಮಾನವಿಲ್ಲ. ಕ್ಷೇತ್ರದ ಬಗ್ಗೆಯಾಗಲಿ, ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಬಗ್ಗೆಯಾಗಲಿ ಅಲ್ಲಿನ ಪರಂಪರೆಯ ಬಗ್ಗೆ ನಿಮಗಿಂತ ಹೆಚ್ಚು ಕಾಳಜಿ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರವಾಗುತ್ತಿದೆ. ರೋಷ-ದ್ವೇಷ ಏನೂ ಇಲ್ಲ. ಧರ್ಮಸ್ಥಳದ ಬಗ್ಗೆ ನಮ್ಮ ನಂಬಿಕೆ ಅಚಲವಾಗಿದೆ ಎಂದು ಹೇಳಿದರು.

ಬಿಜೆಪಿ ಹಿರಿಯ ಶಾಸಕ ಎಸ್.ಸುರೇಶ್‌ಕುಮಾರ್ ಮಾತನಾಡಿ, ಶಿವಕುಮಾರ್ ಭಕ್ತನಾಗಿ ಹೇಳಿದ್ದಾರೆಯೋ, ಡಿಸಿಎಂ ಆಗಿ ಹೇಳಿದ್ದಾರೋ ಗೊತ್ತಿಲ್ಲ. ಎಸ್‌ಐಟಿ ರಚನೆ ಮಾಡುವ ಹಿಂದಿನ ದಿನ ದಕ್ಷಿಣ ಕನ್ನಡ ಪೊಲೀಸರೇ ತನಿಖೆ ನಡೆಸಲು ದಕ್ಷರಾಗಿದ್ದಾರೆ ಎಂದು ಹೇಳಿದ್ದರು. ಸರ್ಕಾರದ ಹೇಳಿಕೆ ನೋಡಿದರೆ ಹೇಳಿಕೆಗೂ ನಡುವಳಿಕೆಗೂ ಸಂಬಂಧವಿಲ್ಲದಂತಾಗಿದೆ. ಅನಾಮಿಕನನ್ನು ಎಸ್‌ಐಟಿ ಕಸ್ಟಡಿಯಲ್ಲಿಟ್ಟುಕೊಳ್ಳಬೇಕು. ಧರ್ಮಸ್ಥಳಕ್ಕೆ ನುಗ್ಗುತ್ತೇವೆ ಎಂದು ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕ್ರಮವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!