Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು ಸರದಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿ

R Ashok

ಬೆಂಗಳೂರು: ಧರ್ಮಸ್ಥಳ ಆಯ್ತು, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರು ಸರದಿ. ಈ ಘಟನೆಗೆ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.‌ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದ್ದೂರು ಕಲ್ಲೆಸೆತ ಹಾಗೂ ಲಾಠಿ ಚಾರ್ಜ್‌ ಹೇಯಕೃತ್ಯ. ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್‌ ಅವರು ಅಲ್ಲ. ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ. ನಾವು ಪಾಕಿಸ್ತಾನದಲ್ಲಿದ್ದಿವೋ, ಕರ್ನಾಟಕದಲ್ಲಿದ್ದೀವೋ ಎಂಬ ಭ್ರಮೆ ಮೂಡುತ್ತಿದೆ ಎಂದು ಕಿಡಿಕಾರಿದರು.

ಇನ್ನು ತಿಮರೋಡಿ ಗ್ಯಾಂಗ್‌ ಸಿದ್ದರಾಮಯ್ಯನ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆ ಮಾಡುವುದು ಸಾರ್ವಜನಿಕ ರಸ್ತೆ. ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್‌ ಕೊಟ್ಟಿರುವುದು. ಇವರ ಯೋಗ್ಯತೆಗೆ ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್‌ ಅವಶ್ಯಕತೆ ಇತ್ತಾ? ಹಿಂದೂಗಳ ಮೇಲೆ ಲಾಠಿ ಚಾರ್ಜ್‌, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಈ ತರಹ ಗೂಂಡಾಗಳು ಮಸೀದಿಯಲ್ಲಿ ಇರುತ್ತಾರೆ ಎಂದು ನಿಮಗೆ ಜ್ಞಾನ ಬೇಡವೇ. ಮದ್ದೂರು ಘಟನೆಗೆ ಸಿಎಂ ಹಾಗೂ ಡಿಸಿಎಂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Tags:
error: Content is protected !!