Mysore
19
clear sky

Social Media

ಶನಿವಾರ, 14 ಮಾರ್ಚ್ 2026
Light
Dark

ಧರ್ಮಸ್ಥಳ ಪ್ರಕರಣ : ಯುಟ್ಯೂಬರ್‌ ಸಮೀರ್‌ಗೆ ಎಸ್‌ಐಟಿಯಿಂದ ಪ್ರಶ್ನೆಗಳ ಬಾಣ

youtuber sameer

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವ ಹೂತ್ತಿದ್ದೇನೆ ಅಂತ ಹೇಳಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿದೆ. ಇದರ ನಡುವೆ ಯುಟ್ಯೂಬರ್ ಸಮೀರ್ ವಿರುದ್ಧವೂ ಬೆಳ್ತಂಗಡಿ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದರು.

ದೊಂಬಿ ಮಾಡುವ ಉದ್ದೇಶದಿಂದ ವಿಡಿಯೋ ಮಾಡಿದ ಆರೋಪದಲ್ಲಿ ಸುಮೋಟೋ ಕೇಸ್‌ ದಾಖಲಿಸಿಕೊಂಡಿದ್ದ ಪೊಲೀಸರು, ಶುಕ್ರವಾರ ಸಮೀರ್‌ ಬಂಧನಕ್ಕೆ ಮುಂದಾಗಿದ್ದರು. ಆದರೆ, ನಿರೀಕ್ಷಣಾ ಜಾಮೀನು ಪಡೆದಿದ್ದ ಸಮೀರ್‌ ಅಜ್ಞಾತವಾಗಿದ್ದರು.

ಹೀಗಾಗಿ, ಪೊಲೀಸರು ಶನಿವಾರ ಆತನ ಬೆಂಗಳೂರು ಹಾಗೂ ಬಳ್ಳಾರಿ ನಿವಾಸಕ್ಕೆ ತೆರಳಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ಹೀಗಾಗಿ, ಭಾನುವಾರ ಸಮೀರ್‌ ಪೊಲೀಸರ ವಿಚಾರಣೆಗೆ ಹಾಜರಾಗಿದ್ದನು. ಮೂವರು ವಕೀಲರ ಸಮೇತ, ದಾಖಲೆ ಹಿಡಿದು ವಿಚಾರಣೆಗೆ ಬಂದಿದ್ದನು.

ಸಮೀರ್​ಗೆ 45 ಪ್ರಶ್ನೆ
ತನಿಖಾಧಿಕಾರಿ ನಾಗೇಶ್‌ ಕದ್ರಿ ಅವರು ಸಮೀರ್ ಎಂಡಿಯನ್ನ ವಿಚಾರಣೆಗೆ ಒಳಪಡಿಸಿದರು. ಧರ್ಮಸ್ಥಳ ಬಗ್ಗೆ ಮಾಡಿದ್ದ ವಿಡಿಯೋ ಮೇಕಿಂಗ್​ಗೆ ಸಹಕಾರ ಕೊಟ್ಟಿದ್ಯಾರು? ಆರೋಪಕ್ಕೆ ಸಾಕ್ಷಿ ಇದೆಯಾ ಸೇರಿದಂತೆ ಚಿನ್ನಯ್ಯನ ಲಿಂಕ್ ಬಗ್ಗೆಯೂ ಸೇರಿದಂತೆ ಸುಮಾರು 45 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ.

Tags:
error: Content is protected !!