Mysore
29
clear sky

Social Media

ಸೋಮವಾರ, 19 ಜನವರಿ 2026
Light
Dark

ಕಚೇರಿಯಲ್ಲೇ DGP ರಾಮಚಂದ್ರರಾವ್‌ ರಾಸಲೀಲೆ ; ವಿಡಿಯೋ ವೈರಲ್‌

ಬೆಂಗಳೂರು : ರಾಜ್ಯದ ಗೃಹ ಇಲಾಖೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರಾಸಲೀಲೆ ಪ್ರಕರಣ ಹೊರಬಂದಿದ್ದು, ಕಾನೂನು ರಕ್ಷಣೆ ಮಾಡಬೇಕಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಡೀ ಇಲಾಖೆಯೇ ತಲೆತಗ್ಗಿಸುವಂತಹ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನದ ಡಿಜಿಪಿ ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯೊಬ್ಬಳ ಜೊತೆ ಅಶ್ಲೀಲವಾಗಿ ವರ್ತಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನೇಕ ಮಾಧ್ಯಮಗಳು ಕೂಡ ಇದನ್ನು ಬಿತ್ತರಿಸಿದ್ದು ಸುಮಾರು 43 ಸೆಕೆಂಡಿರುವ ವಿಡಿಯೋದಲ್ಲಿ ರಾಮಚಂದ್ರರಾವ್ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿರುವುದು ಇಡೀ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಅವರು ವರದಿ ನೀಡಬೇಕೆಂದು ಪೊಲೀಸ್ ಮಹಾ ನಿರ್ದೇಶಕ ಡಾ.ಎಸ್.ಸಲೀಂ ಅವರಿಗೆ ಸೂಚನೆ ಕೊಟ್ಟಿದ್ದಾರೆ.
ಇನ್ನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು ತಕ್ಷಣವೇ ರಾಮಚಂದ್ರರಾವ್ ಅವರನ್ನು ಸೇವೆಯಿಂದ ಅಮಾನತು ಪಡಿಸಬೇಕೆಂದು ಒತ್ತಾಯಿಸಿದೆ.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿರುವ ರಾಮಚಂದ್ರ ರಾವ್ ಅವರು, ಮಹಾರಾಣಿ ಕಾಲೇಜಿನ ವೃತ್ತದಲ್ಲಿರುವ ತಮ್ಮ ಕಚೇರಿಯಲ್ಲಿ ಮಹಿಳೆಯನ್ನು ತಬ್ಬಿಕೊಳ್ಳುವುದು, ಮುತ್ತಿಕ್ಕುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ.

ಕೆಲ ತಿಂಗಳ ಹಿಂದೆ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಬ್ಬಿಕೊಂಡಿದ್ದಾರೆ. 4-5 ತಿಂಗಳಲ್ಲಿ ರಾಮಚಂದ್ರ ರಾವ್‌ ಪೊಲೀಸ್‌ ಇಲಾಖೆಯಿಂದ ನಿವೃತ್ತರಾಗಲಿದ್ದರು. ನಿವೃತ್ತರಾಗುವ ಸಮಯದಲ್ಲೇ ಅವರು ರಹಸ್ಯ ಕ್ಯಾಮೆರಾದ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ.

ರಾಮಚಂದ್ರರಾವ್ ಅವರ ರಾಸಲೀಲೆ ವಿಡಿಯೋ ಬಿಡುಗಡೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಚೇರ್ ಮೇಲೆ ಕುಳಿತು ಮಹಿಳೆಯನ್ನ ಅಪ್ಪಿಕೊಂಡು IPS ಅಧಿಕಾರಿ ಸರಸ ನಡೆಸಿದ್ದು, ಇದು ರನ್ಯಾರಾವ್​ ಪ್ರಕರಣಕ್ಕಿಂತ ಮೊದಲು ನಡೆದಿರುವ ಘಟನೆ ಎಂಬ ಮಾಹಿತಿ ಸಿಕ್ಕಿದೆ. ಅತ್ತ ಮಗಳು ರನ್ಯಾರಾವ್​ ಚಿನ್ನ ಕಳ್ಳಸಾಗಾಣಿಕೆ ಕೇಸ್​​ನಕಲ್ಲಿ ಸಿಕ್ಕಿ ಒದ್ದಾಡುತ್ತಿದ್ದರೆ ಇತ್ತ ಮಲತಂದೆಯ ರಾಸಲೀಲೆಯ ವಿಡಿಯೋ ವೈರಲ್​​ ಆಗಿರೋದು ಜನ ಹುಬ್ಬೇರುವಂತೆ ಮಾಡಿದೆ.

ಸರ್ಕಾರ ಯಾವ ರೀತಿಯ ಕ್ರಮವನ್ನು ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಹಿಂದೆ ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಪುತ್ರಿ ರನ್ಯ ರಾವ್‌ಗೆ ಶಿಷ್ಟಾಚಾರ ಉಲ್ಲಂಘಿಸಿ ವಿಮಾನ ನಿಲ್ದಾಣದಲ್ಲಿ ವಿಐಪಿ ಟ್ರೀಟ್‌ಮೆಂಟ್‌ ನೀಡಿದ್ದಕ್ಕೆ ಸುದ್ದಿಯಾಗಿದ್ದರು.

ಯಾರು ಈ ರಾಮಚಂದ್ರ ರಾವ್​​?
ಕೆ. ರಾಮಚಂದ್ರ ರಾವ್ ಕರ್ನಾಟಕ ಕೇಡರ್​​​ನ ಐಪಿಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಆಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಇವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಡಿಜಿಪಿ ಮತ್ತು ಅಧ್ಯಕ್ಷ ಮತ್ತು ಎಂ.ಡಿ ಆಗಿ ಬಡ್ತಿ ನೀಡಲಾಗಿತ್ತು. ಬಳಿಕ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇವರ ಮಲಮಗಳು ರನ್ಯಾ ರಾವ್ ಭಾಗಿ ಪ್ರಕರಣ ಸಂಬಂಧ ಪೊಲೀಸ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಮಾರ್ಚ್ 2025ರಲ್ಲಿ ಇವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು.

ದೃಶ್ಯದಲ್ಲಿರುವುದು ನಾನಲ್ಲ ; ಡಿಜಿಪಿ
ದೃಶ್ಯದಲ್ಲಿರುವುದು ನಾನಲ್ಲ. ಇದು ನನ್ನನ್ನು ಟಾರ್ಗೆಟ್ ಮಾಡಿ ಸಿಲುಕಿಸಲು ಮಾಡಿರುವ ದುರುದ್ದೇಶಪೂರ್ವಕ ಕೃತ್ಯ. ಗೊತ್ತಿರುವವರೇ ನನ್ನನ್ನು ಸಿಲುಕಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ರಾಮಚಂದ್ರ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

“ಈ ವಿಡಿಯೋ ಬಹಳ ಹಳೆಯದ್ದು ಸುಮಾರು 10 ವರ್ಷಗಳ ಹಿಂದಿನದ್ದು. ಅದು ಬೆಳಗಾವಿಯಲ್ಲಿ ಇದ್ದಾಗ ತೆಗೆದಿರುವುದು ಎಂಬ ಮಾಹಿತಿ ನನಗೆ ದೊರಕಿದೆ. ಇದನ್ನು ಈಗ ಬಿಡುಗಡೆ ಮಾಡಿ ನನ್ನ ಖ್ಯಾತಿಗೆ ಧಕ್ಕೆತರುವ ಪ್ರಯತ್ನ ನಡೆದಿದೆ. ನಾನು ಇದಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತೇನೆ.” ಎಂದು ಹೇಳಿದ್ದಾರೆ.

ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿರುವಾಗಲೇ ಹಲವು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ಈ ವಿಡಿಯೋಗಳು ಭಾರೀ ವೈರಲ್ Let’s. ಜೊತೆಯಲ್ಲೇ ಈ ‘ಕಾಮಕಾಂಡ’ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯು ಪೊಲೀಸ್ ಇಲಾಖೆಯ ನೈತಿಕತೆ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಜಿಪಿ ಶ್ರೇಣಿಯ ಅಧಿಕಾರಿಯೇ ಇಂತಹ ಅಸಭ್ಯ ಕೃತ್ಯಗಳಲ್ಲಿ ತೊಡಗಿರುವುದು ಇಲಾಖೆಯ ವಿಶ್ವಾಸಾರ್ಹತೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ.

ಈ ವಿಚಾರವಾಗಿ ಕರ್ನಾಟಕ ರಾಜ್ಯ ಸರ್ಕಾರ & ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ರಾಮಚಂದ್ರ ರಾವ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಪ್ರಕರಣದ ತನಿಖೆ ಆರಂಭವಾದ ಬಳಿಕ, ಹೆಚ್ಚಿನ ಸಾಕ್ಷ್ಯಗಳ ಸಂಗ್ರಹ ಮತ್ತು ದೂರುದಾರರ ಹೇಳಿಕೆ ದಾಖಲಾದ ಮೇಲೆ ಈ ವಿಚಾರ ಸಂಬಂಧ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ ಈ ಪ್ರಕರಣ ಪೊಲೀಸ್ ಇಲಾಖೆಯ ಒಳಗಿನ ನೈತಿಕತೆಯ ಬಗ್ಗೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Tags:
error: Content is protected !!