ಮಂಗಳೂರು: ಐನಾತಿ ಕಳ್ಳನೋರ್ವನು ಭಕ್ತಿಯಿಂದ ಕೈಮುಗಿದು, ಕೊರಗಜ್ಜನ ಕಾಣಿಕೆ ಹುಂಡಿಯನ್ನೇ ಎಗರಿಸಿ ಪರಾರಿಯಾದ ಘಟನೆ ನಗರದ ಮೇರಿಹಿಲ್‌ನಲ್ಲಿ ನಡೆದಿದೆ.
ಎ.29ರಂದು ಬೆಳ್ಳಂಬೆಳಗ್ಗೆ 5.52ರ ಸುಮಾರಿಗೆ ಮೇರಿಹಿಲ್‌ನ ಕೊರಗಜ್ಜನ ಕಟ್ಟೆಗೆ ಬಂದ ಈತ ಮೊದಲಿಗೆ ಭಕ್ತಿಯಿಂದ ಕೈಮುಗಿದಿದ್ದಾನೆ. ಬಳಿಕ ಕಟ್ಟೆಗೊಂದು ಸುತ್ತು ಬಂದು ಕ್ಷಣ ಹೊತ್ತು ಮತ್ತೆ ಕೈಮುಗಿದಿದ್ದಾನೆ. ಬಳಿಕ ಅಲ್ಲಿಯೇ ಇದ್ದ ಕಾಣಿಕೆ ಹುಂಡಿಯನ್ನು ಎಗರಿಸಿ ಹಿಂಭಾಗದಿಂದ ಹೊರಬಂದು ಪರಾರಿಯಾಗಿದ್ದಾನೆ.
ಇದನ್ನೂ ಓದಿ:- ಕೊಡಗಿನಲ್ಲಿ ರಾತ್ರಿ ಸುರಿದ ಮಳೆಗೆ ಭಾರೀ ಅವಾಂತರ
ಕಳ್ಳ ಭಕ್ತನ ಚಹರೆ ಹಾಗೂ ಕರಾಮತ್ತು ಕರಾಮತ್ತು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.





