Mysore
16
clear sky

Social Media

ಬುಧವಾರ, 21 ಜನವರಿ 2026
Light
Dark

ಮುಡಾ ಹಗರಣ: ದೇಸಾಯಿ ಆಯೋಗ ತನಿಖೆ ಆರಂಭಿಸಿದೆ: ಪರಮೇಶ್ವರ್‌

ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಇಲ್ಲ ಸಲ್ಲದ ಆರೋಪಗಳನ್ನು, ಹೇಳಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ಗೊಂದಲ ಸೃಷ್ಠಿಸುವ ಬದಲು ಈಗಾಗಲೇ ತನಿಖೆ ಆರಂಭಿಸಿರುವ ಪಿ.ಎನ್‌ ದೇಸಾಯಿ ಆಯೋಗಕ್ಕೆ ಮಾಹಿತಿ ನೀಡಲಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಅಕ್ರಮದ ಬಗ್ಗೆ ದೇಸಾಯಿ ಆಯೋಗ ತನಿಖೆ ಆರಂಭಿಸಿದೆ. ಮುಡಾ ಹಗರಣ ಬಗ್ಗೆ ಯಾವುದೇ ಮಾಹಿತಿ ಇದ್ದರೂ ವಿರೋಧ ಪಕ್ಷಗಳು ಈ ಆಯೋಗಕ್ಕೆ ಮಾಹಿತಿ ನೀಡಿ ತನಿಖಾ ಪ್ರಕ್ರಿಯೆಗೆ ಸಹಕರಿಸಲಿ. ಅದು ಬಿಟ್ಟು ಬಹಿರಂಗವಾಗಿ ಗೊಂದಲ ಉಂಟುಮಾಡುವ ಹೇಳಿಕೆಗಳನ್ನು ಕೊಡುವುದನ್ನು ಮೊದಲು ನಿಲ್ಲಿಸಲಿ ಎಂದು ಹೇಳಿದರು.

ರಾಜ್ಯಪಾಲರು ಭದ್ರತೆ ಕೇಳಿದ ಹಿನ್ನೆಲೆಯಲ್ಲಿ ಉನ್ನತ ಭದ್ರೆಯನ್ನು ಒದಗಿಸಲಾಗಿದೆ. ರಾಜ್ಯಪಾಲರಿಗೆ ಯಾವ ರೀತಿಯ ಬೆದರಿಕೆ ಬಂದಿದೆ ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ. ಬಿಜೆಪಿಯವರ ಇತ್ತೀಚೆಗಿನ ಬೆಳವಣಿಗೆಯೇ ಇಂತಹ ಸನ್ನಿವೇಶಗಳಿಗೆ ಕಾರಣವಾಗಿದೆ ಎಂದರು.

ಇನ್ನು ಎಚ್‌ಡಿ ಕುಮಾರಸ್ವಾಮಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಷ್ಟೆ ಹೇಳಿದರು.

Tags:
error: Content is protected !!