ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2023ಕ್ಕೆ ಹೋಲಿಸಿದರೆ ಈ ವರ್ಷದಲ್ಲಿಯೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ.60 ರಷ್ಟು ಏರಿಕೆಯಾಗಿರುವುದು ತಿಳಿದುಬಂದಿದೆ.
ಬೆಂಗಳೂರು ಸೇರಿ ಎಲ್ಲೆಡೆ ವಾತಾವರಣ ಆಗಾಗ ಬದಲಾಗುತ್ತಿರುವುದರಿಂದ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗಿದೆ. ಜೊತೆಗೆ ಇತರ ಜ್ವರದ ಕೇಸ್ಗಳು ಕೂಡ ಏರಿಕೆಯಾಗಿವೆ.
2023ರ ಜೂನ್ನಲ್ಲಿ ಒಟ್ಟು 2,003 ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ವರ್ಷ ಜೂನ್ನಲ್ಲಿ 4886 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 1,230 ಜನರಿಗೆ ಡೆಂಗ್ಯೂ ಬಂದಿದೆ
ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಬಂದಿದೆ. ಜನವರಿಯಿಂದ ಜೂನ್20 ರವರೆಗೆ ಒಟ್ಟು 7343 ಕೇಸ್ ಪತ್ತೆಯಾಗಿದು, ಈ ಮೂಲಕ ಶೇ 60ರಷ್ಟು ಡೆಂಗ್ಯೂ ಪ್ರಕರಣಗಳು ಏರಿಕೆ ಕಂಡಿದೆ.