Mysore
27
few clouds

Social Media

ಸೋಮವಾರ, 16 ಮಾರ್ಚ್ 2026
Light
Dark

ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಡ್ಯಾಂ ಗೇಟ್‌ ಬದಲಾವಣೆಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್‌

dkshivakumar

ಬೆಂಗಳೂರು: ರಾಜ್ಯದಲ್ಲಿ ಇರುವ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಜ್ಯದ 50 ವರ್ಷದ ಹಳೆಯ ಎಲ್ಲಾ ಜಲಾಶಯಗಳ ಹಳೆಯ ಗೇಟ್‌ ಬದಲಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯಗಳಿಗೆ ಹೊಸ ಗೇಟ್‌ ಅಳವಡಿಸುತ್ತೇವೆ. ಮೊದಲು ತುಂಗಭದ್ರಾ ಜಲಾಶಯ ಗೇಟ್‌ ಬದಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಹಮದಾಬಾದ್‌ ಕಂಪನಿಗೆ ಗೇಟ್‌ ಅಳವಡಿಸಲು ಕೊಡಲಾಗಿದೆ. ಮೆಟಿರಿಯಲ್‌ ಬಂದಿದೆ. ಅಳವಡಿಸುವ ಕೆಲಸ ನಡೆಯುತ್ತಿದೆ. 6 ಗೇಟ್‌ಗಳನ್ನು ಮೇವರೆಗೆ ಚೇಂಜ್‌ ಮಾಡುತ್ತೇವೆ. ತುಂಗಭದ್ರಾ ವಿಚಾರದಲ್ಲಿ ಮೂರು ರಾಜ್ಯಗಳು ತೀರ್ಮಾನ ಮಾಡಬೇಕು. ಮೊದಲು ತುಂಗಭದ್ರಾ ಮಾಡಿದ ಬಳಿಕ ಎಲ್ಲಾ ಜಲಾಶಯದ ಗೇಟ್‌ ಬದಲಾವಣೆ ಮಾಡುತ್ತೇವೆ ಎಂದು ಹೇಳಿದರು.

 

Tags:
error: Content is protected !!