Mysore
25
broken clouds

Social Media

ಮಂಗಳವಾರ, 13 ಜನವರಿ 2026
Light
Dark

ರಾಯಚೂರಿನಲ್ಲಿ ಪಕ್ಷಿಗಳ ನಿಗೂಢ ಸಾವು: ಮತ್ತೆ ಹಕ್ಕಿಜ್ವರದ ಆತಂಕ

ರಾಯಚೂರು: ಇಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಹಕ್ಕಿಜ್ವರದ ಆತಂಕ ಮನೆಮಾಡಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಪ್ರತೀ ದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್‌ ಫಿಶರ್‌, ಸುವರ್ಣಪಕ್ಷಿ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಸಾವನ್ನಪ್ಪುತ್ತಿವೆ.

ಕಳೆದ ಐದಾರು ದಿನಗಳಿಂದಲೂ ಮಾನ್ವಿ ಪಟ್ಟಣ, ರಬಣಕಲ್‌ ಸೇರಿದಂತೆ ಹಲವೆಡೆ ಪಕ್ಷಗಳು ಇದ್ದಕ್ಕಿದ್ದಂತೆ ಮರದ ಮೇಲಿಂದ ಬಿದ್ದು, ಸಾವನ್ನಪ್ಪುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರದಲ್ಲಿ ಆತಂಕ ಮನೆಮಾಡಿದ್ದು, ಇದು ಹಕ್ಕಿ ಜ್ವರ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಶುವೈದ್ಯಾಧಿಕಾರಿಗಳು ಮರದಿಂದ ಬಿದ್ದ ಪಕ್ಷಿಗಳಿಗೆ ಇಂಜೆಕ್ಷನ್‌ ನೀಡಿ ರಕ್ಷಣೆ ಮಾಡಿದ್ದಾರೆ. ಮೃತ ಪಕ್ಷಿಯ ಕಳೆಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಒಂದು ವೇಳೆ ವರದಿಯಲ್ಲಿ ಹಕ್ಕಿ ಜ್ವರ ಎಂದು ದೃಢವಾದರೆ, ಕೋಳಿ ಸಾಕಾಣಿಕೆ ಮೇಲೆ ಭಾರೀ ಹೊಡೆತ ಬೀಳಲಿದ್ದು, ಕೋಳಿ ಸಾಕಾಣಿಕೆ ಮಾಡುತ್ತಿರುವ ಮಾಲೀಕರಿಗೆ ಢವ ಢವ ಶುರುವಾಗಿದೆ ಎನ್ನಲಾಗುತ್ತಿದೆ.

 

 

 

Tags:
error: Content is protected !!