ಚನ್ನಪಟ್ಟಣ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮಾತು ಮಾತಿಗೂ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷ ಟಾಂಗ್ ಕೊಡುತ್ತಿದ್ದು, ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಇಬ್ಬರ ನಡುವಿನ ಜಟಾಪಟಿ ಮುಂದುವರಿದಿದೆ.
ಇತ್ತೀಚೆಗೆ ನಡೆದ ಸರ್ಕಾರಿ ಅಧಿಕಾರಿಗಳ ಸಭೆಯೊಂದರಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಿಗಳನ್ನ ಗುಲಾಮರು ಎಂದು ಜರೆದಿದ್ದರು. ಇದಕ್ಕೆ ಚನ್ನಪಟ್ಟಣದಲ್ಲಿ ಬೇವೂರಿನಲ್ಲಿ ಇಂದು(ಜೂ.26) ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಹಿಂದಿನ ಶಾಸಕರು ಅಧಿಕಾರಿಗಳನ್ನು ಗುಲಾಮರು ಅಂದಿದ್ದನ್ನು ಮಾಧ್ಯಮದಲ್ಲಿ ನೋಡಿದೆ. ಗುಲಾಮರು ಅನ್ನೋದು ಎಲ್ಲಾದರೂ ಉಂಟಾ? ಅಧಿಕಾರಿಗಳು ಯಾರಿಗೂ ಗುಲಾಮರಾಗುವುದು ಬೇಡ. ಅಧಿಕಾರಿಗಳು ಜನರ ಸೇವೆ ಮಾಡಬೇಕು ಅಂತ ಈ ಹುದ್ದೆಗೆ ಬಂದಿರುತ್ತಾರೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌದದಲ್ಲಿ ಬರೆದಿದೆ. ಅಧಿಕಾರಿಗಳು ಯಾರಿಗೂ ಗುಲಾಮರಾಗೋದು ಬೇಡ ಎಂದರು.





