ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಎಂ.ಬಿ.ಪಾಟೀಲ್ ಅವರು ನಾಳೆ ನಡೆಯುವ ಹೂಡಿಕೆದಾರರ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ, ಸ್ಥಳವನ್ನು ಪರಿಶೀಲಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಹೂಡಿಕೆದಾರರ ಸಮಾವೇಶ ನಾಳೆ(ಫೆ.11) ನಡೆಯಲಿದೆ. ಈ ವಿಚಾರವಾಗಿ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಅವರು ಪ್ರದರ್ಶನ ತಾಣಗಳು, ಗೋಷ್ಠಿಗಳು ನಡೆಯಲಿರುವ ಸ್ಥಳಗಳು ಚರ್ಚೆ ಮತ್ತು ಒಡಂಬಡಿಕೆ ನಡೆಯಲಿರುವ ಸಭಾಂಗಣಗಳು, ಕಂಟ್ರಿ ಪೆವಿಲಿಯನ್ ಹಾಗೂ ಫುಡ್ ಕೋರ್ಟ್ ಸೇರಿದಂತೆ ಇನ್ನಿತರ ಸ್ಥಳಗಳನ್ನು ಖುದ್ದಾಗಿ ವೀಕ್ಷಿಸಿ ಅಂತಿಮ ಕ್ಷಣಗಳ ಕೆಲ ಸುಧಾರಣೆಗಳತ್ತ ಗಮನ ಹರಿಸಿ ಎಂದು ಸಲಹೆಗಳನ್ನು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ನಾಳೆ ಸಂಜೆ 4 ಗಂಟೆಗೆ ಸಮಾವೇಶವೂ ಉದ್ಘಾಟನೆಗೊಳ್ಳಲಿದೆ. ಇನ್ನು ಈ ಸಮಾವೇಶವೂ ರಾಜ್ಯದ ಐಟಿ, ಬಿಟಿ ಹಾಗೂ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಪುಷ್ಟಿ ತುಂಬಲಿದೆ ಎಂದು ಹೇಳಿದರು.





