Mysore
24
few clouds

Social Media

ಶುಕ್ರವಾರ, 14 ಮಾರ್ಚ್ 2025
Light
Dark

ಡಿಸಿಎಂ ಡಿ.ಕೆ.ಶಿವಕುಮಾರ್‌ ಡಿನ್ನರ್‌ ಪಾರ್ಟಿ: ಸಿಎಂ ಬಣದ ಇಬ್ಬರು ಸಚಿವರು ಗೈರು, ಬಿಜೆಪಿಯ ಇಬ್ಬರು ಶಾಸಕರು ಭಾಗಿ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ರಾತ್ರಿ ಆಯೋಜಿಸಿದ್ದ ಡಿನ್ನರ್‌ ಪಾರ್ಟಿ ಸಿಎಂ ಬಣದ ಇಬ್ಬರು ಸಚಿವರು ಗೈರರಾಗಿದ್ದರೆ, ಬಿಜೆಪಿಯ ಇಬ್ಬರು ಶಾಸಕರು ಭಾಗಿಯಾಗಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಿನ್ನೆ(ಮಾರ್ಚ್.‌13) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಎಲ್ಲಾ ಶಾಸಕರಿಗೆ ಹಾಗೂ ಕೆಪಿಸಿಸಿ ಪದಾಧಿಕಾರಿಗಳಿಗೆ ಡಿನ್ನರ್‌ ಪಾರ್ಟಿ ಆಯೋಜಿಸಿದ್ದರು. ಈ ಡಿನ್ನರ್‌ ಪಾರ್ಟಿ ಸಚಿವರಾದ ಡಾ.ಜಿ.ಪರಮೇಶ್ವರ್‌ ಹಾಗೂ ಕೆ.ಎನ್‌.ರಾಜಣ್ಣ ಹಾಜರಾಗಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷವಾಗಿರುವ ಬಿಜೆಪಿಯ ಶಾಸಕರಾದ ಎಸ್.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರು ಭಾಗಿಯಾಗಿದ್ದಾರೆ.

ಇನ್ನು ಈ ಡಿನ್ನರ್‌ ಪಾರ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ಹಿರಿಯ ನಾಯಕರು, ಸಚಿವರು ಹಾಗೂ ಶಾಸಕರು ಭಾಗವಹಿಸಿ ಶುಭಾಶಯ ಕೋರಿದ್ದಾರೆ. ಆದರೆ ಸಿಎಂ ಬಣದ ಇಬ್ರು ಸಚಿವರು ಗೈರಾಗಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಠಿಸಿದೆ.

 

Tags: