ಬೆಂಗಳೂರು: ಮಾಧ್ಯಮದ ಮೂಲಕ ಪಕ್ಷದ ಹುದ್ದೆ ಕೇಳ್ತಾರಾ ಎಂದು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಬಗ್ಗೆ ನಿನ್ನೆ ಸಚಿವ ಸತೀಶ್ ಜಾರಕಿಹೊಳಿ ಅವರು, ಹೈಕಮಾಂಡ್‌ಗೆ ಆಗ್ರಹಿಸಿದ್ದರು.
ಪೂರ್ಣ ಅವಧಿಗೆ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಇಲ್ಲದೇ ಬೇರೆಯವರನ್ನು ಆ ಸ್ಥಾನಕ್ಕೆ ಕೂರಿಸಿ ಎಂದು ಹೈಕಮಾಂಡ್‌ಗೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಸಚಿವ ಜಾರಕಿಹೊಳಿ ಹೇಳಿಕೆ ಸಂಬಂಧ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಮಾಧ್ಯಮದ ಮೂಲಕ ಪಕ್ಷದಲ್ಲಿ ಹುದ್ದೇ ಕೇಳುತ್ತಾರಾ? ಸ್ಥಾನ ಸಿಗಬೇಕು ಎಂದರೆ ಮೀಡಿಯಾದಲ್ಲಿ ಕೊಡ್ತಾರಾ ಎಂದು ಮೀಡಿಯಾದಲ್ಲಿ ಅಂಗಡಿಯಲ್ಲಿ ಎಲ್ಲೂ ಸ್ಥಾನ ಸಿಗಲ್ಲ. ನಮ್ಮ ಕೆಲಸ ಗುರುತಿಸಿ ಹುದ್ದೆ ಕೊಡುತ್ತಾರೆ. ಕೆಲಸ ಮಾಡುವ ಆಧಾರದ ಮೇಲೆ ಸ್ಥಾನ ನಿರ್ಧಾರವಾಗುತ್ತದೆ ಎಂದು ಟಾಂಗ್ ಕೊಟ್ಟರು.
ಇನ್ನು ಮುಂದುವರಿದು ಮಾತನಾಡಿದ ಅವರು, ಅಂಗಡಿಯಲ್ಲೋ, ಮಾಧ್ಯಮದಲ್ಲೋ ಸ್ಥಾನ ಸಿಗುತ್ತಾ? ಮೀಡಿಯಾ ಮೂಲಕ ಯಾರಾದರೂ ಪಾರ್ಟಿಯ ಹುದ್ದೆ ಕೇಳ್ತಾರಾ? ಇದನ್ನೆಲ್ಲಾ ನಾನು ಹೊಸದಾಗಿ ನೋಡುತ್ತಿದ್ದೇನೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.





