Mysore
32
few clouds

Social Media

ಶನಿವಾರ, 12 ಏಪ್ರಿಲ 2025
Light
Dark

ಏ.15 ರಿಂದ ಲಾರಿ ಮುಷ್ಕರ| ರಾಜಕೀಯಕ್ಕೆ ಮಣಿದು ಮುಷ್ಕರ ಮಾಡೋದು ಸರಿಯಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ರಾಮನಗರ/ಕನಕಪುರ: ಲಾರಿ ಮಾಲೀಕರು ರಾಜಕೀಯ ಒತ್ತಡಕ್ಕೆ ಮಣಿದು ಏಪ್ರಿಲ್‌.15ರಿಂದ ಮುಷ್ಕರ ಮಾಡೋದು ಸರಿಯಲ್ಲ. ಮುಷ್ಕರ ಮಾಡೋದರಿಂದ ನಿಮಗೆಯೇ ಅನೇಕ ನಷ್ಟವಾಗುತ್ತದೆ. ಹಾಗಾಗಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಕನಕಪುರದಲ್ಲಿ ಇಂದು(ಏಪ್ರಿಲ್‌.6) ಡಿಸೇಲ್‌ ದರ ಏರಿಕೆ ಕಾರಣ ಲಾರಿ ಮುಷ್ಕರಕ್ಕೆ ಕರೆ ನೀಡಿರುವ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಲಾರಿ ಮಾಲೀಕರು ಮುಷ್ಕರ ಮಾಡುತ್ತಾರೆಂ ಮಾಹಿತಿ ನನಗೆ ಇಲ್ಲ. ಈ ಹಿಂದೆ ಪೆಟ್ರೋಲ್‌ ಮತ್ತು ಡಿಸೇಲ್‌ ದರ ಏರಿಕೆಯಾಗಿತ್ತು. ಆಗ ಅವರು ಯಾಕೆ ಮುಷ್ಕರ ಮಾಡಲಿಲ್ಲ? ಆದರೆ ಇದೀಗ ರಾಜಕೀಯ ಕಾರಣಕ್ಕಾಗಿ ಮುಷ್ಕರ ಮಾಡುತ್ತೇವೆಂದು ಹೇಳುತ್ತಿದ್ದಾರೆ. ನಾನು ಈಗಲೂ ಅವರಲ್ಲಿ ಮನವ ಮಾಡುತ್ತೇನೆ, ರಾಜಕೀಯಕ್ಕೆ ಮಣಿದು ಲಾರಿ ಮುಷ್ಕರ ಮಾಡುವುದು ಸರಿಯಲ್ಲ ಎಂದರು.

ಲಾರಿ ಮಾಲೀಕರು ಸರ್ಕಾರದೊಂದಿಗೆ ಇರಬೇಕು. ಆದರೆ ಅವರೇ ಮುಷ್ಕರ ಮಾಡುತ್ತೀವೆಂದು ಹೇಳುತ್ತಿದ್ದಾರೆ. ಇದರಿಂದ ಅವರಿಗೆ ನಷ್ಟ ಆಗುತ್ತದೆ. ಅಲ್ಲದೇ ಒಂದು ಮುಷ್ಕರ ಮಾಡಿದರೆ ಅದರ ನಷ್ಟ ಭರಿಸಲು ನಿಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಹೇಳಿದರು.

Tags: