Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದಾಸನ ಕೈದಿ ಸಂಖ್ಯೆ ಇದೀಗ ಲಕ್ಕಿ ನಂಬರ್!‌  ಗಾಡಿಗೆ ರಿಜಸ್ಟರ್‌ ಮಾಡಿಸಲು ಮುಂದಾದ ದರ್ಶನ್‌ ಅಭಿಮಾನಿ

ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಬಿಡುಗಡೆಗೆ ಅವರ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ನೀಡಲಾಗಿರುವ ಕೈದಿ ನಂಬರ್‌ ಅಭಿಮಾನಿಗಳಿಗೆ ಇದೀಗ ಲಕ್ಕಿ ನಂಬರ್‌ ಆಗುತ್ತಿದೆ. ಸದ್ಯ ಹೀಗೊಂದು ಟ್ರೆಂಡಿಂಗ್‌ ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು. ಮೈಸೂರು ಹತ್ತಿರದ ಬನ್ನೂರಿನ ಧನುಷ್ ಎಂಬ ಅಭಿಮಾನಿ ‌ ನಟ ದರ್ಶನ್‌ಗೆ ಜೈಲಲ್ಲಿ ನೀಡಲಾಗಿರುವ ಕೈದಿ ನಂಬರ್‌ 6106
ನನಗೆ ಲಕ್ಕಿ ನಂಬರ್‌ ಎಂದಿದ್ದಾರೆ.  ಜೊತೆಗೆ ಇದೇ ನಂಬರ್‌ ನಮ್ಮ ಗಾಡಿ ಮೇಲೆ ಇರುತ್ತದೆ ಎಂದಿದ್ದಾರೆ. ಅಷ್ಟೆ ಅಲ್ಲದೇ ಆರ್‌ಟಿಓ ಕಚೇರಿಯಲ್ಲಿ ಕೈದಿ ನಂಬರ್‌ 6106 ನ್ನು ರಿಜಿಸ್ಟರ್‌ ಮಾಡಿಸಲು ಮುಂದಾಗಿದ್ದಾರೆ.

ದರ್ಶನ್‌ ನೆನೆದು ಕಣ್ಣೀರಿಟ್ಟ ಅಭಿಮಾನಿ ಧನುಷ್‌, ದರ್ಶನ್  ಬಿಡುಗಡೆಗೆ ಹರಕೆ ಹೊತ್ತು, ನಾಡ ದೇವತೆ ಚಾಮುಂಡೇಶ್ವರಿಯಲ್ಲಿ 101 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.

ನಮ್ಮ ಬಾಸ್‌ ಏನು ತಪ್ಪು ಮಾಡಿಲ್ಲ. ನಮ್ಮ ಬಾಸ್‌ನ್ನು ನಾವು ಬಿಟ್ಟುಕೊಡುವುದಿಲ್ಲ. ಕಾನೂನು ಎಲ್ಲರಿಗೆ ಒಂದೇ. ತಪ್ಪು ಮಾಡಿಲ್ಲ ಅಂದರೆ ರಾಜಾರೋಷವಾಗಿ ಬಿಡುಗಡೆಯಾಗಿ ಬರುತ್ತಾರೆ ಎಂದಿದ್ದಾರೆ ಅಭಿಮಾನಿ ಧನುಷ್.

Tags:
error: Content is protected !!