Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ಸಾರ್ವಜನಿಕರಿಗೆ ಅವಕಾಶ: ಇಲ್ಲಿದೆ ವೇಳಾಪಟ್ಟಿ

ಹಾಸನ: ಹಾಸನಾಂಬ ದೇವಾಲಯದ ಬಾಗಿಲನ್ನು ನಿನ್ನೆ (ಅಕ್ಟೋಬರ್.24)‌ ಶಾಸ್ತ್ರೋಕ್ತವಾಗಿ ತೆರೆಯಲಾಗಿದೆ. ಆದರೆ, ದೇವಿಯ ದರ್ಶನಕ್ಕೆ ಇಂದಿನಿಂದ(ಅ.25) ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿಯೇ ಜನರ ದಂಡು ಹರಿದು ಬಂದಿದೆ.

ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗಿನ ಜಾವ 4 ಗಂಟೆಯಿಂದಲೇ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ಶಕ್ತಿ ದೇವತೆಯ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಲ್ಲದೇ ಇಂದು ಶುಕ್ರವಾರ ಆಗಿರುವುದರಿಂದ ದೇವಿಯ ದರ್ಶನಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜನರ ದಂಡೇ ಹರಿದು ಬಂದಿದೆ.

ಹಾಸನಾಂಬೆಯ ದರ್ಶನದ ವಿವರ
26-10-2024(ಶನಿವಾರ) ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
27-10-2024(ಭಾನುವಾರ) ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
28-10-2024(ಸೋಮವಾರ) ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
29-10-2024(ಮಂಗಳವಾರ) ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
30-10-2024(ಬುಧವಾರ) ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
31-10-2024(ಗುರುವಾರ)ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
1-11-2024(ಶುಕ್ರವಾರ) ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳಿಕ ಮಧ್ಯಾಹ್ನ 3 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ.
2-11-2024(ಶನಿವಾರ) ಬೆಳಿಗ್ಗೆ 4 ರಿಂದ ಸಂಜೆ 7 ಗಂಟೆಯವರೆಗೆ, ನಂತರ ರಾತ್ರಿ 11 ರಿಂದ ಬೆಳಗಿನ ಜಾವ 6 ಗಂಟೆಯವರೆಗೆ.
3-11-2024(ಭಾನುವಾರ) ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಮಧ್ಯಾಹ್ನ 12 ಗಂಟೆಗೆ ಶ್ರೀ ಹಾಸನಾಂಬೆಯ ಗರ್ಭಗುಡಿಯನ್ನು ಮುಚ್ಚಲಾಗುವುದು.

ದರ್ಶನಕ್ಕೆ ಕ್ಯೂರ್‌ ಕೋಡ್‌ ವ್ಯವಸ್ಥೆ
ಸರ್ಕಾರದ ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಹಾಸನಾಂಬ ದರ್ಶನಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ಅದೇ ನೀರಿಕ್ಷೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು 10 ಕಿ.ಮೀ.ಉದ್ದದ ಬ್ಯಾರಿಕೇಡ್‌ ವ್ಯವಸ್ಥೆ ಮಾಡಿ, ಸರತಿ ಸಾಲಿನಲ್ಲಿ ನಿಲ್ಲುವವರಿಗೆ ನೆರಳಿನ ವ್ಯವಸ್ಥೆ ಹಾಗೂ ಗಣ್ಯರು ಮತ್ತು ಅತಿ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಗಮವಾಗಿ ಹಾಸನಾಂಬ ದೇವಿಯ ದರ್ಶನ ಮಾಡಲು ಕ್ಯೂರ್‌ ಕೋಡ್‌ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ದರ್ಶನಕ್ಕೆ ಪಾಸ್‌ ಪಡೆಯುವವರು ಕ್ಯೂರ್‌ ಕೋಡ್‌ ಮೂಲಕ ಹಣ ಪಾವತಿಸಿ ವಿಶೇಷ ಪಾಸ್‌ ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ನೇರ ದರ್ಶನಕ್ಕೆ 1000 ರೂ.ಟಿಕೆಟ್‌ ದರ
ನೇರವಾಗಿ ಹಾಸನಾಂಬೆಯ ದರ್ಶನವನ್ನು ಪಡೆಯ ಬಯಸುವವರಿಗೆ 1000 ರೂ. ದರದ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ.

Tags: