ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿರುವ ದರ್ಶನ್‌ರನ್ನು ನೋಡಲು ಅವರ ಆಪ್ತ ಬಳಗಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದು, ಅಂತೆಯೇ ಅವರ ಆಪ್ತ ಸ್ನೇಹಿತ ವಿನೋಧ ಪ್ರಭಾಕರ್ ಅವರು ದರ್ಶನ್‌ರನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿನೋದ್ ಪ್ರಭಾಕರ್, ಮೊದಲನೆಯದಾಗಿ ಮೃತ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಕುಟುಂಬಕ್ಕೆ ಭಗವಂತ ಧೈರ್ಯ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ದರ್ಶನ್ ಅವರನ್ನು ಜೈಲಿನ ನಿಯಾಮವಳಿ ಪ್ರಕಾರವೇ ಭೇಟಿ ಮಾಡಿದೆ. ಕೇವಲ ಎರಡು ಸೆಕೆಂಡ್ ಮಾತ್ರ ದರ್ಶನ್ ಸಾರ್ ಮಾತಾಡೋಕೆ ಸಿಕ್ಕಿದ್ದು. ಅವರ ಮುಖದಲ್ಲಿ ಮೌನ ಇತ್ತು. ಏನನ್ನೂ ಮಾತಡಲಿಲ್ಲ. ನೋಡಿದ ತಕ್ಷಣ ನಾನು ಬಾಸ್ ಅಂತ ಕರೆದೆ ಅದಕ್ಕೆ ಅವರು ಟೈಗರ್ ಅಂದು ಶೇಕ್ ಹ್ಯಾಂಡ್ ಮಾಡಿದರು ಅಷ್ಟೆ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ನಾನು ದರ್ಶನ್ ಭೇಟಿಯಾಗಿ 4 ತಿಂಗಳು ಕಳೆದಿವೆ. ಅವರ ಹುಟ್ಟುಹಬ್ಬದ ನಂತರ ಒಂದು ಪಾರ್ಟಿಯಲ್ಲಿ ಸಿಕ್ಕಿದ್ವಿ ಅಷ್ಟೇ. ನಾನು ಟಿವಿಯಲ್ಲಿ ನೋಡಿಯೇ ಎಲ್ಲವನ್ನೂ ತಿಳಿದಿದ್ದು, ನಿಮಗೆಷ್ಟು ಗೊತ್ತಿದ್ದಿಯೋ ನನಗೂ ಅಷ್ಟೆ ಗೊತ್ತಿರೋದು ಎಂದರು.
ಇಷ್ಟು ದಿನ ದರ್ಶನ್ ಅವರನ್ನು ನೋಡಲು ಬಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವ್ರು ಟೀಕೆ ಮಾಡಿದ್ರು, ಈ ಬಗ್ಗೆಯೂ ಮಾತನಾಡಿದ ಅವರು, ಅನ್ನಪೂರ್ಣೇಶ್ವರಿ ಠಾಣೆ ಬಳಿ ಬೇಟಿಯಾಗಲೂ ತೆರಳಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ. ಆಗಾಗಿ ಇಂದು ಇಲ್ಲಿ ಬಂದು ಭೇಟಿಯಾಗಿದ್ದೇನೆ ಎಂದು ಹೇಳಿದರು.