ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಈಗ ಪಶ್ಚಾತ್ತಾಪ ಆಗಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ನಟನ ಪತ್ನಿ ಹಾಗೂ ಪುತ್ರ ಜೈಲಿಗೆ ಬಂದು ಭೇಟಿ ಮಾಡಿ ಹೋಗಿದ್ದಾರೆ. ಈ ಮಧ್ಯೆ ನಟ ದರ್ಶನ್ ಜೈಲಿನ ದಿನಚರಿ ಬಗ್ಗೆ ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿತ್ತು.
ನಟ ದರ್ಶನ್ ಜೈಲಿನ ದಿನಚರಿ ನೋಡುವುದಾದರೆ ರಾತ್ರಿ ಬೇಗ ನಿದ್ದೆಗೆ ಜಾರಲಿದ್ದು, ಮರುದಿನ ಬೆಳಿಗ್ಗೆ 6 ಗಂಟೆ ಸುಮಾರಿಗೆ ಎದ್ದು ಬಿಸಿನೀರು ಸೇವಿಸುತ್ತಾರಂತೆ. ಬಳಿಕ ಜೈಲಿನ ಸಿಬ್ಬಂದಿ ನೀಡಿದ ಉಪಹಾರ ಸವಿಯುತ್ತಾರೆ. ಆದರೆ ನಟ ದರ್ಶನ್ ಅಷ್ಟಾಗಿ ಯಾರೊಂದಿಗೂ ಬೆರೆಯುತ್ತಿಲ್ಲ ಎನ್ನಲಾಗಿದೆ.
ಇನ್ನು ಜೈಲಿನಲ್ಲಿರುವ ದರ್ಶನ್‌ಗೆ ತಲೆಕೂದಲು ಮೆಂಟೈನ್ ಮಾಡೋದೇ ದೊಡ್ಡ ಕಷ್ಟ ಆಗಿದೆಯಂತೆ. ವಿಗ್ ಮೆಂಟೈನ್ ಮಾಡಲಾಗದೇ ದರ್ಶನ್ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರ ಬ್ಯಾರಕ್‌ನಲ್ಲಿ ದರ್ಶನ್ ಜೊತೆಗೆ ರೇಣುಕಾಸ್ವಾಮಿ ಪ್ರಕರಣದ ಇತರೆ ಆರೋಪಿಗಳು ಇದ್ದು, ಆದರೆ ಅವರೊಂದಿಗೂ ದರ್ಶನ್ ಮಾತನಾಡುತ್ತಿಲ್ಲವಂತೆ. ನಿಮ್ಮಿಂದಲೇ ನನಗೆ ಹೀಗಾಯ್ತು ಎಂಬ ಬೇಸರದಲ್ಲಿ ಅವರೊಂದಿಗೂ ಮಾತನಾಡುತ್ತಿಲ್ಲವಂತೆ. ದರ್ಶನ್‌ಗೆ ಅಟಾಚ್ ಬಾತ್ ರೂಂ ಇರುವ ಕೊಠಡಿಯನ್ನು ಮಾತ್ರ ನೀಡಿದ್ದು, ಸಾಮಾನ್ಯ ಖೈದಿಯಂತೆ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.





