Mysore
25
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದರ್ಶನ್‌ ಕೊಲೆ ಮಾಡುವಷ್ಟು ಕ್ರೂರಿಯಲ್ಲ: ಶಾಸಕ ಉದಯ್‌ ಸಮರ್ಥನೆ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಕೃತ್ಯವನ್ನು ಮದ್ದೂರು ಶಾಸಕ ಕೆ.ಎಂ ಉದಯ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಇಂದು(ಜೂ.21) ಬೆಂಗಳೂರಿನಲ್ಲಿ ಮಾತನಾಡಿದ ಉದಯ್‌, ದರ್ಶನ್‌ ಸ್ವಲ್ಪ ಮುಂಗೋಪಿ, ಸಿಟ್ಟು ಜಾಸ್ತಿ. ಆದರೆ ಕೊಲೆ ಮಾಡುವಷ್ಟು ಕ್ರೂರಿಯಲ್ಲ ಎಂದಿದ್ದಾರೆ.

ದರ್ಶನ್‌ ನನಗೆ ಹಲವು ವರ್ಷಗಳಿಂದ ಸ್ನೇಹಿತ. ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿ, ಇವರ ಮೇಲೆ ಏನಾದ್ರು ಹಾಕಿದ್ರ ಗೊತ್ತಿಲ್ಲ. ಶಿಘ್ರದಲ್ಲೇ ಎಲ್ಲವೂ ತಿಳಿಯಲಿದೆ. ತನಿಖೆಯಲ್ಲಿ ಎಲ್ಲ ಸತ್ಯಸತ್ಯತೆ ಹೊರಬರಲಿದೆ. ನಾನು ಈಗಲೇ ಏನನ್ನೂ ಹೇಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ದರ್ಶನ್‌ ಅಭಿಮಾನಿಗಳು ಹಾಗೂ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತನಾಡುತ್ತಾನೆ ಅಷ್ಟೇ. ಇನ್ನೇನು ಕೆಲವೇ ದಿನಗಳಲ್ಲಿ ಏನು ಎತ್ತ ಹೊರಬಂದು, ರಾಜ್ಯದ ಜನರಿಗೆ ತಿಳಿಯಲಿದೆ ಎಂದಿದ್ದಾರೆ.

ಇನ್ನೂ ತಮ್ಮ ಗನ್‌ಮ್ಯಾನ್‌ ಮೇಲೆ ದರ್ಶನ್‌ ಬೆಂಬಲಿಗರಿಂದ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಗನ್‌ಮ್ಯಾನ್‌ ಮೇಲೆ ಹಲ್ಲೆ ಅನ್ನೋದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು, ಆ ರೀತಿಯ ಘಟನೆ ನಡೆದಿಲ್ಲ. ನಿಮಗೆ ಇದೆಲ್ಲಾ ಯಾರು ಹೇಳಿದ್ದು. ಆ ಘಟನೆ ನಡೆದೆ ಇಲ್ಲ ಎಂದರು.

ನನಗೆ ಐದಾರು ಜನ ಗನ್‌ಮ್ಯಾನ್‌ ಇದ್ದಾರೆ. ಹಲ್ಲೆ ನಡೆದಿದ್ದರೆ ನನಗೆ ತಿಳಿಯುತ್ತಿಲ್ಲವಾ? ಅಂತಾದ್ದೂ ಯಾವುದು ನಡೆದಿಲ್ಲ. ಇದೆಲ್ಲಾ ಸುಳ್ಳು ಸೃಷ್ಟಿಯಷ್ಟೇ ಎಂದರು.

 

 

Tags: