ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಹಲವರ ಬಂಧನವಾಗಿದ್ದು, ಎಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದರ್ಶನ್ ಸೇರಿ ಹಲವು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರಿಸಲಾಗಿದೆ. ನಾಲ್ಕು ಆರೋಪಿಗಳನ್ನು ತುಮಕೂರಿನ ಜೈಲಿಗೆ ಸ್ಥಳಾಂತರಿಸಲಾಗಿದೆ.
ಇನ್ನು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ದರ್ಶನ್ ಅನ್ನು ನೋಡಲು ಜೈಲಿನ ಬಳಿ ಅಭಿಮಾನಿಗಳು ಬರುತ್ತಲೇ ಇದ್ದಾರೆ.ಜೈಲಿನೊಳಗೆ ಬಿಡುವುದಿಲ್ಲ ಎಂದು ಗೊತ್ತಿದ್ದರು ಕೂಡ ದರ್ಶನ್ ಅನ್ನು ನೋಡಲು ಬೇರೆ ಜಿಲ್ಲೆಗಳಿಂದ ಮಹಿಳಾ ಅಭಿಮಾನಿಗಳು ಸೇರಿದಂತೆ ಇತರ ಅಭಿಮಾನಿಗಳು ಕೂಡ ಆಗಮಿಸುತ್ತಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಹಿಳಾ ಅಭಿಮಾನಿಯೊಬ್ಬರು ಮಾತನಾಡಿದ್ದು, ದರ್ಶನ್ ಅಂದ್ರೆ ನಮಗೆ ಬಹಳ ಇಷ್ಟ,ಅವರ ಎಲ್ಲಾ ಸಿನಿಮಾಗಳು ನೋಡಿದ್ದೇನೆ ಅವರು ಹೆಣ್ಣು ಮಕ್ಕಳಿಗೆ ಕೊಡುವ ಗೌರವ ನಮಗೆ ತುಂಬಾ ಇಷ್ಟ. ನಮ್ಮ ಬಾಸ್ ಈ ರೀತಿ ಮಾಡಿರಲ್ಲ,ಅವರು ಕೊಲೆ ಮಾಡಿರೋದನ್ನ ನೀವು ನೋಡಿಲ್ಲ ನಾವು ನೀಡಿಲ್ಲ ಹೀಗಿರುವಾಗ ಅದೇಗೆ ಅವರನ್ನ ಕೊಲೆ ಮಾಡಿದ್ದಾರೆ ಎನ್ನುತ್ತೀರಾ ಎಂದು ಹೇಳಿದರು.