ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲೂ ನಟ ದರ್ಶನ್ ಅಂಡ್ ಗ್ಯಾಂಗ್ ಕೃತ್ಯ ಸದ್ದು ಮಾಡಿದೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಪುಟ ಸಭೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಗ್ಯಾಂಗ್‌ನಿಂದ ನಡೆದ ಕೊಲೆ ಪ್ರಕರಣದ ಕುರಿತು ಚರ್ಚೆ ನಡೆಸಲಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇಂತಹ ಪೈಶಾಚಿಕ ಕೃತ್ಯವನ್ನು ನಾವು ಎಲ್ಲೂ ನೋಡಿಲ್ಲ. ಪ್ರಕರಣದ ಬಗ್ಗೆ ಯಾರೂ ಕೂಡ ತುಟಿ ಬಿಚ್ಚಬೇಡಿ. ಕಾನೂನು ತನ್ನ ಕೆಲಸ ಮಾಡುತ್ತೆ. ಪ್ರಕರಣದ ಬಗ್ಗೆ ಪರ ವಿರೋಧದ ಚರ್ಚೆ ಬೇಡವೇ ಬೇಡ ಎಂದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ.