ಬೆಂಗಳೂರು: ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್, ಕಲ್ಲಂಗಡಿ, ಬಟಾಣಿಗೆ ಬಳಸುವ ಕೃತಕ ಬಣ್ಣದಲ್ಲೂ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಂಶಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಈ ಬೆನ್ನಲ್ಲೇ ಟಮೊಟೋ ಸಾಸ್‌ನಲ್ಲೂ ಅಪಾಯಕಾರಿ ರಾಸಾಯನಿಕ ಬಳಕೆ ಮಾಡುತ್ತಿರುವ ಬಗ್ಗೆ ವರದಿ ಬಹಿರಂಗಪಡಿಸಿದೆ.
ಆಹಾರ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಟಮೋಟೋ ಸಾಸ್‌ನಲ್ಲೂ ರಾಸಾಯನಿಕ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಇದು ಆರೋಗ್ಯಕ್ಕೆ ಭಾರೀ ಹಾನಿಯನ್ನುಂಟು ಮಾಡುತ್ತದೆ ಎಂದು ವರದಿ ಬಹಿರಂಗಪಡಿಸಿದ್ದು, ಜನತೆಯಲ್ಲಿ ಆತಂಕ ಮನೆಮಾಡಿದೆ.
ಕಳೆದ ಫೆಬ್ರವರಿಯಲ್ಲಿ ಟಮೋಟೋ ಸಾಸ್ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿಯು ಅಧಿಕಾರಿಗಳ ಕೈ ಸೇರಿದ್ದು, ವರದಿಯಲ್ಲಿ ಅನ್‌ಸೇಫ್ ಎಂದು ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ. ಈ ಸಾಸ್ ತಿನ್ನುವುದರಿಂದ ರಕ್ತದೊತ್ತಡ ಅಧಿಕವಾಗುತ್ತದೆ. ನಿಶಕ್ತಿಗೆ ಕಾರಣವಾಗುತ್ತದೆ. ಇದನ್ನು ತಿನ್ನುವುದರಿಂದ ತಾಳ್ಮೆ ಮತ್ತು ಶಾಂತ ಮನಸ್ಥಿತಿ ಕಡಿಮೆಯಾಗುತ್ತದೆ. ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಲಾಗಿದೆ.
ಮತ್ತಷ್ಟು ಆತಂಕಕ್ಕಾರಿ ಮಾಹಿತಿಯೆಂದರೆ ಬೆಲ್ಲ, ಚಿಪ್ಸ್, ಪ್ರೈ ಬಟಾಣಿ ಪದಾರ್ಥಗಳಿಗೂ ಕೂಡ ರಾಸಾಯನಿಕ ಮಾಡುತ್ತಿರುವುದು ಬಯಲಾಗಿದೆ.




